ಚಿಕ್ಕೋಡಿ: ಪ್ರವಾಹ ಸಂತ್ರಸ್ತರಿಗೆ ನಿರ್ಮಿಸಿದ ಮನೆಗಳನ್ನು ಅನರ್ಹರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಭಿರಡಿ ಗ್ರಾಮ ಪಂಚಾಯತ್ ಬಂದ್ ಮಾಡಿ ಸಂತ್ರಸರು ಪ್ರತಿಭಟನೆ ನಡೆಸಿದ್ರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭಿರಡಿ ಗ್ರಾಮ ಪಂಚಾಯತ್ ಎದುರು ಸಂತ್ರಸ್ತರು ಧರಣಿ ನಡೆಸಿದ್ರು. 2005 ರಲ್ಲಿ ಪ್ರವಾಹ ಸಂತ್ರಸ್ತರಿಗೆ 134 ಮನೆಗಳನ್ನು ನಿರ್ಮಿಸಲಾಗಿತ್ತು. ಈ ಮನೆಗಳಲ್ಲಿ ಅನರ್ಹರು ವಾಸಮಾಡುತ್ತಿದ್ದು, ಅರ್ಹ ಪ್ರವಾಹ ಸಂತ್ರಸ್ತರಿಗೆ ಮನೆಗಳನ್ನು ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು.
ಈ ಸಂಬಂಧ ಹಲವು ಬಾರಿ ರಾಯಬಾಗ ತಹಶಿಲ್ದಾರ್, ಚಿಕ್ಕೋಡಿ ಎಸಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದ್ರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ರು.