ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ತಗ್ಗಿದ ಹಿನ್ನೆಲೆ ಕೃಷ್ಣಾ ಪ್ರವಾಹ ಸಂಪೂರ್ಣ ಇಳಿಕೆಯಾಗಿದೆ. ಹೀಗಾಗಿ ಜನ ಜೀವನ ಸಹಜ ಸ್ಥಿತಿಯತ್ತ ಮರಳಿದ್ದು, ಮತ್ತೆ ರಸ್ತೆ ಸಂಚಾರ ಆರಂಭಗೊಂಡಿದೆ.
ಹೌದು, ಚಿಕ್ಕೋಡಿ ತಾಲೂಕಿನ ಸದಲಗಾ - ಬೋರಗಾಂವ, ಯಕ್ಸಂಬಾ - ದಾನವಾಡ ಸೇತುವೆ ಹಾಗೂ ರಾಯಬಾಗ ತಾಲೂಕಿನ ರಾಯಬಾಗ-ಚಿಂಚಲಿ ಹಾಗೂ ಕುಡಚಿ-ಮಿರಜ್ ರಾಜ್ಯ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಮತ್ತು ಚಿಕ್ಕೋಡಿ ತಾಲೂಕಿನ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಹಾಗೆ ಕಳೆದ 15 ದಿನಗಳಿಂದ ಜಲಾವೃತ್ತಗೊಂಡಿದ್ದ, ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಪರ್ಕ ಸೇತುವೆಗಳು ಕೂಡಾ ಸಂಚಾರಕ್ಕೆ ಮುಕ್ತವಾಗಿವೆ.