ಬೆಳಗಾವಿ: ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡುಟ್ಟಿರುವ ಕಾರಣ ಜಿಲ್ಲೆಯ ಗೋಕಾಕ್ ತಾಲೂಕಿನ ಅಡಿಬಟ್ಟಿ ಗ್ರಾಮ ನಡುಗಡ್ಡೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಅಡಿಬಟ್ಟಿ ಗ್ರಾಮದ ಮನೆಯೊಂದರ ಮೇಲೆ 9 ಜನರು ಸಿಲುಕಿಕೊಂಡಿದ್ದಾರೆ.
ಪ್ರತೀ ಬಾರಿ ಪ್ರವಾಹ ಬಂದಾಗ ಅಡಿಗಟ್ಟಿ ನಡುಗಡ್ಡೆಯಾಗಿ ಮಾರ್ಪಡುತ್ತದೆ. ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದ ವೇಳೆ ಗ್ರಾಮಕ್ಕೆ ಕಳ್ಳರು ನುಗ್ಗುವ ಭೀತಿ ಹಿನ್ನೆಲೆಯಲ್ಲಿ ಅಡಿಬಟ್ಟಿ ಗ್ರಾಮದಲ್ಲಿಯೇ 9 ಜನರು ಉಳಿದಿದ್ದರು. ಇವರೆಲ್ಲರೂ ಪ್ರವಾಹಕ್ಕೆ ಸಿಲುಕಿದ್ದು, ಮನೆಯ ತಾರಸಿ ಮೇಲೆ ನಿಂತು ಕೈ ಮಾಡುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
![ಟೆರೆಸ್ ಮೇಲೆ ಕುಳಿತು ಪ್ರಾಣ ಉಳಿಸಿಕೊಂಡ 9 ಯುವಕರು](https://etvbharatimages.akamaized.net/etvbharat/prod-images/kn-bgm-01-19-flood-silukida-yuvakaru-7201786_19082020085528_1908f_1597807528_269.jpg)
ಈ ಒಂಭತ್ತು ಜನರು ಮನೆ ತಾರಸಿ ಮೇಲೆಯೇ ರಾತ್ರಿಯಿಡೀ ಕುಳಿತುಕೊಂಡಿದ್ದಾರೆ. ಗೋಕಾಕ್ ತಾಲೂಕಾಡಳಿತ ಸಿಲುಕಿಕೊಂಡವರ ರಕ್ಷಣೆಗೆ ಧಾವಿಸಿದೆ.