ಬೆಳಗಾವಿ: ತಾಲೂಕಿನ ವಾಘವಾಡೆ ಗ್ರಾಮದಲ್ಲಿ ಸ್ಥಳೀಯರಿಂದ ಸ್ವಚ್ಚತಾ ಕಾರ್ಯಕ್ರಮ ಕೈಗೊಂಡ ವೇಳೆ ಕಸದ ರಾಶಿಯಲ್ಲಿ ನಾಲ್ಕು ಕಂಟ್ರಿ ಪಿಸ್ತೂಲ್‌ಗಳು ಪತ್ತೆಯಾಗಿವೆ.
ಗ್ರಾಮದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದ ಜನರು ಈ ಪಿಸ್ತೂಲ್ಗಳನ್ನು ನೋಡಿ ಗಾಬರಿಗೊಂಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಸ್ಥಳಕ್ಕೆ ದೌಡಾಯಿಸಿದ ಬೆಳಗಾವಿ ಗ್ರಾಮೀಣ ಪೊಲೀಸರು, ಪಿಸ್ತೂಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಆಯುಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಬಂದೂಕಿನ ಸುತ್ತ ಅನುಮಾನದ ಹುತ್ತ:
4 ಕಂಟ್ರಿಮೇಡ್ ಪಿಸ್ತೂಲ್‌ಗಳು ಪತ್ತೆಯಾದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಿಗೆ ಬೆಳಗಾವಿಯ ಸುತ್ತಮುತ್ತಲಿನ ಅರಣ್ಯಪ್ರದೇಶದಲ್ಲಿ ತರಬೇತಿ ನೀಡಲಾಗಿತ್ತು. ತರಬೇತಿ ಪಡೆದ ಬಗ್ಗೆ ಆರೋಪಿಗಳು ಎಸ್‌ಐಟಿ ಗೆ ಮಾಹಿತಿ ನೀಡಿದ್ದರು. ಈಗ ಬೆಳಗಾವಿಯಲ್ಲಿ ನಾಲ್ಕು ಕಂಟ್ರಿಮೇಡ್ ಪಿಸ್ತೂಲ್‌ಗಳು ಪತ್ತೆಯಾಗಿದ್ದು, ಈ ಪಿಸ್ತೂಲ್ಗಳನ್ನು ಗೌರಿ ಹತ್ಯೆ ಹಂತಕರು ಬಳಸಿ ಬಿಸಾಕಿ ಹೋಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.