ಬೆಳಗಾವಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಂಗಡಿಗಳು ಸುಟ್ಟು ಕರಕಲಾದ ಘಟನೆ ಬೆಳಗಾವಿಯ ಪೋರ್ಟ್ ರಸ್ತೆ ಬಳಿ ಕಳೆದ ಮಧ್ಯರಾತ್ರಿ ನಡೆದಿದೆ. ಇಲ್ಲಿನ ಎರಡು ಟಯರ್ ಶಾಪ್, ಬ್ಯಾಟರಿ ಅಂಗಡಿ, ಟ್ರಾನ್ಸ್‌ಪೋರ್ಟ್, ಟೂಲ್ಸ್ ಅಂಗಡಿ ಸೇರಿದಂತೆ ಆರಕ್ಕೂ ಅಧಿಕ ಅಂಗಡಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹೊತ್ತಿ ಉರಿದಿವೆ.
ಈ ಅಂಗಡಿಗಳ ಪಕ್ಕದಲ್ಲೇ ಮೂವತ್ತಕ್ಕೂ ಅಧಿಕ ಮನೆಗಳಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿತ್ತು. ಅವಘಡ ಸಂಭವಿಸುತ್ತಿದ್ದಂತೆ ಅಗ್ನಿಶಾಮಕ ಇಲಾಖೆಗೆ ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಮೂವತ್ತಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದ್ರೆ, ಲಕ್ಷಾಂತರ ರೂ. ಮೌಲ್ಯದ ಸ್ವತ್ತು ಬೆಂಕಿಗಾಹುತಿಯಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಹಾಗೂ ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ:
ಧಗ ಧಗ ಹೊತ್ತಿ ಉರಿದ ರಾಸಾಯನಿಕ ತುಂಬಿದ ಲಾರಿ: ಚಾಲಕ, ಕ್ಲೀನರ್ ಪಾರು!
ದೆಹಲಿ ವಿಕಾಸಪುರಿ ಪ್ರದೇಶದಲ್ಲಿ ಭಾರಿ ಅಗ್ನಿ ಅವಘಡ: ಸ್ಥಳಕ್ಕಾಮಿಸಿದ 19 ಅಗ್ನಿಶಾಮಕ ವಾಹನಗಳು