ETV Bharat / state

ವಿದ್ಯುತ್ ಸ್ಪರ್ಶದಿಂದ 20 ಎಕರೆ ಕಬ್ಬು ಬೆಂಕಿಗಾಹುತಿ: ರೈತ ಕಂಗಾಲು

ಕಟಾವು ಹಂತಕ್ಕೆ ಬಂದಿದ್ದ ಸುಮಾರು 20 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ವಿದ್ಯುತ್​ ಸ್ಪರ್ಶದಿಂದ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಭಾಗದಲ್ಲಿ ನಡೆದಿದೆ.

fire breaks out at sugar cane farm
20 ಎಕರೆ ಕಬ್ಬು ಬೆಂಕಿಗಾಹುತಿ
author img

By

Published : Nov 11, 2020, 5:09 PM IST

ಚಿಕ್ಕೋಡಿ/ಬೆಳಗಾವಿ :ಇನ್ನೇನು ಕಟಾವು ಮಾಡುವ ಹಂತಕ್ಕೆ ಬಂದಿದ್ದ 20 ಎಕರೆ ಕಬ್ಬು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ‌.

20 ಎಕರೆ ಕಬ್ಬು ಬೆಂಕಿಗಾಹುತಿ
ಮೋಳೆ ಗ್ರಾಮದ ತುಕಾರಾಮ ಬನಚೋಡ ಎಂಬ ರೈತ ಬೆಳೆದಿದ್ದ ಕಬ್ಬು ವಿದ್ಯುತ್ ಸ್ಪರ್ಶದಿಂದ ಸುಟ್ಟು ಕರಕಲಾಗಿದೆ.. ಇದಕ್ಕೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರೈತ ಆರೋಪಿಸಿದ್ದಾರೆ. ಹಾಗೂ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.ಈಗಾಗಲೇ ಕೊರೊನಾದಿಂದ ಜೀವನ ನಡೆಸುವುದೇ ಕಷ್ಟವಾಗಿದ್ದು ಕಟಾವು ಬಂದ ಕಬ್ಬಿನ ಬೆಳೆ ನಾಶವಾಗಿದ್ದರಿಂದ ರೈತ ಕಂಗಲಾಗಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದವರು ಬಂದು ಬೆಂಕಿ ನಂದಿಸಿದ್ದಾರೆ. ಇನ್ನು ಸುಟ್ಟು ಕರಕಲಾದ ಕಬ್ಬಿನ ಬೆಳೆಯನ್ನು ಸಕ್ಕರೆ ಕಾರ್ಖಾನೆಗಳು ತೆಗೆದುಕೊಂಡು ಹೋಗಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಈ ರೈತನ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಆದ ನಷ್ಟಕ್ಕೆ ಯಾರು ಹೊಣೆ ಎಂದು ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.