ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಪುಂಡಾಟಿಕೆ ಮೆರೆದ 8 ಮಂದಿ ಶಿವಸೇನೆ ಕಾರ್ಯಕರ್ತರ ವಿರುದ್ಧ ಬೆಳಗಾವಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣೆಯಲ್ಲಿ ಮಹಾರಾಷ್ಟ್ರದ ಎಂಟು ಶಿವಸೇನೆ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆ ವಿರೋಧಿಸಿ ಎರಡು ದಿನಗಳ ಹಿಂದೆ ಶಿವಸೇನೆ ಕಾರ್ಯಕರ್ತರು ರಾಜ್ಯದ ಗಡಿಗೆ ನುಗ್ಗಲು ಯತ್ನಿಸಿದ್ದರು.
ಶಿನೋಳಿ ಚೆಕ್‌ಪೋಸ್ಟ್ ಬಳಿ ಬೆಳಗಾವಿ ಪೊಲೀಸರ ಜೊತೆಗೆ ತಳ್ಳಾಟ-ನೂಕಾಟ ನಡೆಸಿ ಹೈಡ್ರಾಮಾ ಮಾಡಿದ್ದರು. ಕೊಲ್ಲಾಪುರ ಜಿಲ್ಲೆ ಶಿವಸೇನೆ ಅಧ್ಯಕ್ಷ ವಿಜಯ್ ದೇವಣೆ ಸೇರಿ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.