ETV Bharat / state

ಮಾರ್ಕಂಡೇಯ ನದಿಯಲ್ಲಿ ಕೊಚ್ಚಿ ಹೋಗಿದ್ದ ರೈತ ಶವವಾಗಿ ಪತ್ತೆ

ಕೈಕಾಲು ತೊಳೆದುಕೊಳ್ಳುವ ಸಲುವಾಗಿ ಮಾರ್ಕಂಡೇಯ ನದಿ ದಡಕ್ಕೆ ಹೋದ ರೈತ ಸಿದ್ರಾಯಿ ಸುತಗಟ್ಟಿ ಕಾಲು ಜಾರಿ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಇಂದು ಹೊನಗಾ ಗ್ರಾಮದ ಪಕ್ಕದ ಸೇತುವೆ ಬಳಿ ಅವರ ಶವ ಪತ್ತೆಯಾಗಿದೆ.

farmers died by fell in to river in belagavi
ಬೆಳಗಾವಿ ರೈತ ಸಾವು
author img

By

Published : Jun 20, 2021, 12:43 PM IST

ಬೆಳಗಾವಿ: ಕಳೆದ ಮೂರು ದಿನಗಳ ಹಿಂದೆ ಕಾಲು‌ ಜಾರಿ ಮಾರ್ಕಂಡೇಯ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ರೈತ ಇಂದು ಶವವಾಗಿ ಪತ್ತೆಯಾಗಿದ್ದಾರೆ. ತಾಲೂಕಿನ ಕಾಕತಿ ಗ್ರಾಮದ ಸಿದ್ರಾಯಿ ಸುತಗಟ್ಟಿ (65) ಮೃತ ರೈತ.

ಜಮೀನು ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಕೈಕಾಲು ತೊಳೆದುಕೊಳ್ಳಲು ಸೇತುವೆ ಪಕ್ಕದ ದಂಡೆಯಲ್ಲಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಆಯತಪ್ಪಿ ಕಾಲು‌ ಜಾರಿ ಬಿದ್ದು ನದಿಯಲ್ಲಿ ‌ಕೊಚ್ಚಿಕೊಂಡು ಹೋಗಿದ್ದರು.

ನದಿಯಲ್ಲಿ ಕೊಚ್ಚಿ ಹೋಗಿದ್ದ ರೈತ ಶವವಾಗಿ ಪತ್ತೆ

ರೈತನ ಮೃತದೇಹದ ಪತ್ತೆಗಾಗಿ ಸ್ಥಳದಲ್ಲೇ ಬೀಡುಬಿಟ್ಟಿದ್ದ ಎಸ್​ಡಿಆರ್​ಎಫ್ ತಂಡದ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರು ಸತತ ಮೂರು‌ ದಿನಗಳ ಕಾಲ ನದಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆದ್ರೆ,‌ ಇಂದು ರೈತನ ಶವ ತಾಲೂಕಿನ ಹೊನಗಾ ಗ್ರಾಮದ ಪಕ್ಕದ ಸೇತುವೆ ಬಳಿ ಪತ್ತೆ ಆಗಿದೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಭರ್ಜರಿ ಮಳೆ ಸಂಭವ: ಸೂಕ್ಷ್ಮ ಪ್ರದೇಶಗಳ ನಿವಾಸಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.