ಬೆಳಗಾವಿ : ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಪರಿಹಾರ ನಿಧಿಯನ್ನು ಆದಷ್ಟು ಬೇಗ ನೀಡಬೇಕೆಂದು ಆಗ್ರಹಿಸಿ ರಾಮದುರ್ಗ ತಾಲೂಕಿನ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರಾಮದುರ್ಗ ತಾಲೂಕಿನ ಕೆ.ಚಂದರಗಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೂದಗೊಪ್ಪ, ಎಂ.ಚಂದರಗಿ, ಮುರಕಟ್ನಾಳ ಹಾಗೂ ಕೇಸರಕೊಪ್ಪ ಗ್ರಾಮದ ರೈತರು, ಕಳೆದ ಮೂರು ವರ್ಷಗಳಿಂದ ಬರಗಾಲದ ಬೇಗೆಯಲ್ಲಿ ಬೇಯುತ್ತಿದ್ದು ಬೆಳೆಯ ಹಾನಿಯಿಂದ ಸಾಲದ ಹೊರೆ ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.
2017 ಮತ್ತು 18ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಪರಿಹಾರ ನಿಧಿಯನ್ನು ನೀಡಿಲ್ಲ. ಸರ್ಕಾರ ರೈತರತ್ತ ಗಮನ ಹರಿಸಿ ಪರಿಹಾರ ನಿಧಿ ಘೋಷಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.