ETV Bharat / state

ಅಹೋರಾತ್ರಿ ಧರಣಿ.. ಬೆಳಗಾವಿಯಲ್ಲಿ ಇಬ್ಬರು ರೈತ ಮಹಿಳೆಯರು ಅಸ್ವಸ್ಥ..

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡ ಅಹೋರಾತ್ರಿ ಧರಣಿಯಲ್ಲಿ ಇಬ್ಬರು ರೈತ ಮಹಿಳೆಯರು ಅಸ್ವಸ್ಥಗೊಂಡಿದ್ದು, ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

author img

By

Published : Sep 17, 2019, 10:38 AM IST

Updated : Sep 17, 2019, 11:22 AM IST

ಅಹೋರಾತ್ರಿ ಧರಣಿಯಲ್ಲಿ ಅಸ್ವಸ್ಥರಾದ ರೈತ ಮಹಿಳೆಯರು

ಬೆಳಗಾವಿ:ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ರೈತರ ಅಹೋರಾತ್ರಿ ಧರಣಿಯಲ್ಲಿ ಇಬ್ಬರು ರೈತ ಮಹಿಳೆಯರು ಅಸ್ವಸ್ಥರಾಗಿದ್ದಾರೆ.

ರೈತ ಮಹಿಳೆಯರಾದ ಸುರೇಖಾ ಕಾಬೋಜಿ, ಪಾರ್ವತಿ ಕಡಚಗಟ್ಟಿ ಮೂರ್ಛೆ ಹೋಗಿದ್ದು, ರಾತ್ರಿಯೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

ಅಹೋರಾತ್ರಿ ಧರಣಿಯಲ್ಲಿ ಅಸ್ವಸ್ಥರಾದ ರೈತ ಮಹಿಳೆಯರು..

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ, ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

Intro:ಬೆಳಗಾವಿಯಲ್ಲಿ ಸಿಡಿದೆದ್ದ ರೈತರು : ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ

ಬೆಳಗಾವಿ : ಹೋರಾಟ ಹೋರಾಟ ಗೆಲ್ಲೋವರೆಗೂ ಹೋರಾಟ. ಇಂದು ಬೇಳಗಾವಿ ಅಕ್ಷರಶಃ ರೈತರ ಹೋರಾಟದ ಕಿಚ್ಚಿಗೆ, ನಲುಗಿ ಹೋಗಿತ್ತು. ನಗರದ ಅನೇಕ ರಸ್ತೆಗಳು ಬಂದ್ ಆಗಿ ರೈತನ ಸಂಕಷ್ಟದ ಕಟ್ಟೆ ಒಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಹೌದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತ್ರತ್ವದಲ್ಲಿ ಸಾವಿರಾರು ರೈತರು, ಇಂದು ನಗರದ ಪ್ರಮುಖ ಭಾಗಗಳಲ್ಲಿ ಧರಣಿ ಸತ್ಯಾಗ್ರಹ ನಡೆಸಿ. ಚೆನ್ನಮ್ಮ ವೃತ್ತದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಇಷ್ಟೇ ಅಲ್ಲದೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ತಮ್ಮ ಆಕ್ರೋಶ ಹೊರಹಾಕಿದರು.

Body:ಬಾರಕೋಲ್ ಹಿಡಿದು ಚಳುವಳಿ ಮಾಡಿದ ರೈತರು : ಹೌದು ಇದು ಹೆಸರಿಗೆ ಮಾತ್ರ ಹೋರಾಟ ಆಗಿರಲಿಲ್ಲ ಅಕ್ಷರಶಃ ರೈತರ ಕಣ್ಣೀರ ಕಟ್ಟೆ ಒಡೆದು ಹೋಗಿತ್ತು. ಅನೇಕ ರೈತರು ಬಾರಕೋಲಿನ ಏಟು ಬೀಸುತ್ತಾ, ಸರ್ಕಾರಕ್ಕೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದರು. ಪ್ರತಿ ಚಾಟಿ ಏಟಿನ ಶಬ್ದವು ರೈತನ ಸಂಕಷ್ಟ ಎತ್ತಿ ತೋರಿಸುತ್ತಿತ್ತು.

ರಸ್ತೆಯ ಮೇಲೆ ಊಟ : ಹೌದು ಅನೇಕ ಸ್ಥಳಗಳಿಂದ ಬಂದಿದ್ದ ರೈತರು ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಸಬೇಕು ಎಂದು ಧರಣಿ ನಡೆಸಿದ ರೈತರು. ಮನೆಯಿಂದ ತಂದ ಬುತ್ತಿಯನ್ನು ರಸ್ತೆಯ ಮೇಲೆ ಕುಳಿತು ತಿನ್ನುವ ದೃಶ್ಯ ಎಂತವರ ಮನ ಕಲಕುವಂತಿತ್ತು.
Conclusion:ಒಟ್ಟಿನಲ್ಲಿ ಇಂದು ಕುಂದಾನಗರಿಯ ರೈತರ ಸಹನೆಯ ‌ಕಟ್ಟೆ ಒಡೆದು ಹೋಗಿದ್ದು. ಪ್ರವಾಹದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ಕಟ್ಟಿಸಿ ಕೊಡಬೇಕು. ಬೆಳೆ ಹಾನಿಯಾದ ರೈತರ ಪ್ರತಿ ಎಕರೆಗೆ 1 ಲಕ್ಷ ಪರಿಹಾರ ನೀಡಬೇಕು ಎಂಬ ಮನವಿಯ ಜೊತೆಗೆ ಅನೇಕ ರೀತಿಯ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದು ಸರ್ಕಾರ ಯಾವ ರೀತಿಯ ಉತ್ತರ ನೀಡುತ್ತದೆ ಎಂಬುದು ಕಾದು ನೋಡಬೇಕು.

ಬೈಟ್

ಶಿವಕ್ಕ ( ಮೊದಲು ಮಾತನಾಡಿದವರು) ಸಂತ್ರಸ್ತ ಮಹಿಳೆ
ಪಾರ್ವತಿ ( ಸಂತ್ರಸ್ತ ಮಹಿಳೆ)

ವಿನಾಯಕ ಮಠಪತಿ
ಬೆಳಗಾವಿ

Last Updated : Sep 17, 2019, 11:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.