ಬೆಳಗಾವಿ/ಚಿಕ್ಕೋಡಿ: ನೆರೆ ಸಂತ್ರಸ್ತರಿಗೆ ಹಾಗೂ ಬೆಳೆ ಹಾನಿಗೊಳಗಾದ ರೈತರಿಗೆ ಶೀಘ್ರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದ ಜಲಾಶಯಗಳ ನಿರ್ವಹಣೆಯ ಹೊಣೆ ಹೊತ್ತ ಸಿಬ್ಬಂದಿ ಹಾಗೂ ಮಹಾರಾಷ್ಟ್ರದ ಬೇಜವಾಬ್ದಾರಿ ನಿರ್ವಹಣೆಯಿಂದ ಅನೇಕ ಗ್ರಾಮಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಸಂದರ್ಭ ಉಂಟಾಗಿದೆ. ಇದರಿಂದ ಜನ ಜೀವನದ ಅಪಾರ ಹಾನಿಯ ಉಂಟಾಗಿದೆ. ನಷ್ಟದ ಹೊಣೆಯನ್ನು ಮಹಾರಾಷ್ಟ ಹೊತ್ತು ಶೀಘ್ರವೇ ಪರಿಹಾರ ನೀಡಬೇಕು. ಕೇಂದ್ರ ಇದರಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ರು.
ಸೂಕ್ತ ಪರಿಹಾರ ಒದಗಿಸಿ ಎಂದು ರೈತರಿಂದ ತಹಶೀಲ್ದಾರರಿಗೆ ಮನವಿ:
ನೆರೆ ಸಂತ್ರಸ್ತರು ಸುಮಾರು 10 ಗ್ರಾಮಗಳಿಂದ ಕಾಗವಾಡ ಚಲೋ ಕಾರ್ಯಕ್ರಮ ಮಾಡಿ ನೆರೆ ಹಾವಳಿಯಿಂದ ಹಾಳಾದ ಕಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಿ ಎಂದು ಚಿಕ್ಕೋಡಿಯಲ್ಲಿ ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು. ಸರ್ಕಾರ ಪ್ರತಿ ಪಂಡಿತರ ಕುಟುಂಬಕ್ಕೆ 1 ಲಕ್ಷ ಪರಿಹಾರ ಸಹಾಯ ಧನ ನೀಡಬೇಕು, ಹಾಳಾದ ಮನೆಗಳನ್ನ ಪುನರ್ ನಿರ್ಮಾಣ ಮಾಡಬೇಕು , ಸಂಪೂರ್ಣ ಬೆಳೆ ನಾಶವಾಗಿದ್ದು, ಪ್ರತಿ ಎಕರೆಗೆ 1 ಲಕ್ಷ ಸಹಾಯಧನ ಮತ್ತು ಮಕ್ಕಳ ಶಿಕ್ಷಣ ಸಂಪೂರ್ಣ ಉಚಿತ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.