ETV Bharat / state

ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆಗೆ ಹರಸಹಾಸಪಟ್ಟ ರೈತ - Belagavi accidental fire news

ಪ್ರಾಣದ ಹಂಗು ತೊರೆದು ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆಗೆ ರೈತ ಹರಸಹಾಸ ಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ‌ ಅವರೊಳ್ಳಿ ಗ್ರಾಮದಲ್ಲಿ ನಡೆದಿದೆ.

Farmer rescued cow and buffalo from fire in belagavi
ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆ ಮಾಡುತ್ತಿರುವ ರೈತ
author img

By

Published : Jan 20, 2022, 9:19 AM IST

ಬೆಳಗಾವಿ: ತೋಟದ ಮನೆಗೆ ಬೆಂಕಿ ಬಿದ್ದು ಜಾನುವಾರು ಸಹಿತ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ‌ ಅವರೊಳ್ಳಿ ಗ್ರಾಮದಲ್ಲಿ ತಡರಾತ್ರಿ ‌ನಡೆದಿದೆ.

ಅವರೊಳ್ಳಿ ಗ್ರಾಮದ ನವರತ್ನ ಜೋಳದ ಎಂಬುವರಿಗೆ ಸೇರಿದ ತೋಟದ ಮನೆಗೆ ಆಕಸ್ಮಿಕ ‌ಬೆಂಕಿ ತಗುಲಿದೆ. ಈ ವೇಳೆ, ಜೀವವನ್ನು ಲೆಕ್ಕಿಸದೇ ಬೆಂಕಿಯಲ್ಲಿ ನುಗ್ಗಿದ ರೈತ, ಜಾನುವಾರು ಹಾಗೂ ಇತರ ಅಗತ್ಯ ವಸ್ತುಗಳನ್ನು ‌ರಕ್ಷಿಸಿದ್ದಾರೆ. ಆದರೂ ಘಟನೆಯಲ್ಲಿ 1 ಕರು ಬೆಂಕಿಗಾಹುತಿಯಾಗಿದ್ದು, 2 ಎಮ್ಮೆ ಹಾಗೂ 1 ಹಸುವಿಗೆ ಗಂಭೀರ ಗಾಯವಾಗಿದೆ. ತೋಟದ ಮನೆಯಲ್ಲಿದ್ದ ಕೃಷಿ ಸಾಮಗ್ರಿಗಳೆಲ್ಲವೂ ಸುಟ್ಟು ಭಸ್ಮವಾಗಿವೆ. 80 ಸಾವಿರಕ್ಕೂ ಹೆಚ್ಚು ಹಾನಿ ಆಗಿರವ ಬಗ್ಗೆ ಅಂದಾಜಿಸಲಾಗಿದೆ.

ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರು ರಕ್ಷಣೆ ಮಾಡುತ್ತಿರುವ ರೈತ

ಬೆಂಕಿ ಬಿದ್ದ ತೋಟದ ಮನೆಗೆ ನುಗ್ಗಿ ಜಾನುವಾರುಗಳನ್ನು ರಕ್ಷಣೆ ಮಾಡಲು ರೈತ ಹರಸಹಾಸ ಪಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್​​​​ನಲ್ಲಿ ಸೆರೆಹಿಡಿದಿದ್ದಾರೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಆಫ್ಘನ್​ನಲ್ಲಿ ಗುಂಡಿನ ದಾಳಿ: ತಾಲಿಬಾನ್ ಕಮಾಂಡರ್ ಮತ್ತು ಆತನ ಮಗ ಸೇರಿ 6 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.