ಬೆಳಗಾವಿ: ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ಸಿಬ್ಬಂದಿ ಅರೆಬೆತ್ತಲೆಯಾಗಿ ತಲೆ ಮೇಲೆ ಸುಟ್ಟ ಇಟ್ಟಿಗೆ ಹೊತ್ತುಕೊಂಡು ಉರುಳು ಸೇವೆ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಬಂದ್ ಕಾವು: ತಮ್ಮೂರಿಗೆ ತೆರಳಲು ಬಸ್ ಇಲ್ಲದೇ ಕೆಎಸ್ಆರ್ಟಿಸಿ ಚಾಲಕನ ಪರದಾಟ
ಈ ವೇಳೆ ಜೋರಾಗಿ ಕಿರುಚಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಕುಟುಂಬ ಸಮೇತರಾಗಿ ಧರಣಿ ಆರಂಭಿಸಿರುವ ಸಾರಿಗೆ ನೌಕರರು ಆಗಾಗ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆಯುತ್ತಿದ್ದಾರೆ.