ETV Bharat / state

ಮಿಲ್ಟ್ರಿ ಅಧಿಕಾರಿ ಅಂತಾ ನಂಬಿಸಿ ಐವರನ್ನ ಮದುವೆಯಾಗಿದ್ದ ಮಳ್‌ ಮಂಜಾ.. ಇಷ್ಟೇ ಅಲ್ಲ ಇವ್ನ್‌ ಕಥೆ.. ಇನ್ನೂ ಐತಿ!! - ಮಂಜುನಾಥ ಬಿರಾದಾರ್ ಅಕ್ಟೋಬರ್ 21 ರಂದು ಬೆಳಗಾವಿಯ ಕ್ಯಾಂಪ್

ಹುತಾತ್ಮ ಯೋಧರ ಊರುಗಳಿಗೆ ತೆರಳಿ ಯೋಧರಿಗೊಂದು ನಮನ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಮಾಡಿ, ಹುತಾತ್ಮ ಯೋಧರ ಕುಟುಂಬವನ್ನ ಸನ್ಮಾನಿಸುತ್ತಿದ್ದ. ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯಡಿ ವಿಧವಾ ಪಿಂಚಣಿ ಮಾಡಿಸಿಕೊಡ್ತೀನಿ ಎಂದು ಹೇಳಿ, ಹುತಾತ್ಮ ಯೋಧರ ಪತ್ನಿಯರಿಂದ ಹಣ ವಸೂಲಿ ಮಾಡುತ್ತಿದ್ದ..

fake-army-officer-cheating-news-in-belagavi
ಹುತಾತ್ಮ ಯೋಧರ ಪತ್ನಿಯರೇ ಟಾರ್ಗೆಟ್.
author img

By

Published : Nov 8, 2020, 5:39 PM IST

Updated : Nov 8, 2020, 5:46 PM IST

ಬೆಳಗಾವಿ : ತಾನೊಬ್ಬ ಸೇನಾಧಿಕಾರಿ ಅಂತಾ ಹೇಳ್ಕೊಂಡು ಒಂದೆರಡಲ್ಲ ಬರೋಬ್ಬರಿ 5 ಮದುವೆಯಾಗಿದ್ದ ಮಹಾ ಚಪಲ ಚೆನ್ನಿಗನನ್ನ ಕ್ಯಾಂಪ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುತಾತ್ಮ ಯೋಧರ ಪತ್ನಿಯರೇ ಟಾರ್ಗೆಟ್​

ಮಂಜುನಾಥ ಬಿರಾದಾರ್ ಎಂಬಾತ ಬಂಧಿತ ಆರೋಪಿ. ಈತ ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲವತವಾಡ ಗ್ರಾಮದ ನಿವಾಸಿ. ವಯಸ್ಸು 37, ಐದಕ್ಕೂ ಹೆಚ್ಚು ಮದುವೆ, 10ಕ್ಕೂ ಹೆಚ್ಚು ಹುತಾತ್ಮ ಯೋಧರ ಕುಟುಂಬಗಳಿಗೆ ಮೋಸ ಮಾಡಿರೋದೆ ಈತನ ಸಾಧನೆ.

ತಾನೊಬ್ಬ ಅನಾಥ, ತನಗೆ ಯಾರೂ ಇಲ್ಲ. ಸೇನೆಯಲ್ಲಿ ಸುಬೇದಾರ್ ಆಗಿದ್ದೇನೆ, ಮೇಜರ್ ಆಗಿದ್ದೇನೆ ಎಂದು ಬೆಳಗಾವಿ-ಬಾಗಲಕೋಟೆ ಸೇರಿ ವಿವಿಧ ಜಿಲ್ಲೆಗಳ ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದ. ನಕಲಿ ಐಡಿ ಕಾರ್ಡ್, ಸಮವಸ್ತ್ರ ಧರಿಸಿ ಗ್ರಾಮಕ್ಕೆ ಎಂಟ್ರಿ ಕೊಟ್ಟು, ಗ್ರಾಮದ ಮುಖಂಡರನ್ನು ನಂಬಿಸಿ ತಾನು ಮದುವೆಯಾಗಬೇಕು.‌ ಯುವತಿಯನ್ನು ಹುಡುಕುತ್ತಿದ್ದೀನಿ ಅಂತಾ ಹೇಳಿ ಮದುವೆ ಆಗುತ್ತಿದ್ದ.‌ ಮದುವೆಯಾದ ಒಂದು ತಿಂಗಳು ಹೆಂಡತಿಯ ಮನೆಯಲ್ಲಿದ್ದು, ಚಕ್ಕಂದವಾಡಿ ಎಸ್ಕೇಪ್ ಆಗುತ್ತಿದ್ದ.

ಮಿಲಿಟರಿ ಅಧಿಕಾರಿ ಎಂದು ನಂಬಿಸಿ ಐದಕ್ಕೂ ಹೆಚ್ಚು ಮದುವೆಯಾಗಿದ್ದ ಈ ಮಂಜುನಾಥ, ಸೇನೆಯಲ್ಲಿ ಹುತಾತ್ಮರಾದ ಯೋಧರ ಪತ್ನಿಯರನ್ನೇ ಟಾರ್ಗೇಟ್ ಮಾಡುತ್ತಿದ್ದ. ಹುತಾತ್ಮ ಯೋಧರ ಊರುಗಳಿಗೆ ತೆರಳಿ ಯೋಧರಿಗೊಂದು ನಮನ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಮಾಡಿ, ಹುತಾತ್ಮ ಯೋಧರ ಕುಟುಂಬವನ್ನ ಸನ್ಮಾನಿಸುತ್ತಿದ್ದ. ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯಡಿ ವಿಧವಾ ಪಿಂಚಣಿ ಮಾಡಿಸಿಕೊಡ್ತೀನಿ ಎಂದು ಹೇಳಿ, ಹುತಾತ್ಮ ಯೋಧರ ಪತ್ನಿಯರಿಂದ ಹಣ ವಸೂಲಿ ಮಾಡುತ್ತಿದ್ದ ಈತನನ್ನು ಬೆಳಗಾವಿಯ ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 21 ರಂದು ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಮಿಲಿಟರಿ ಏರಿಯಾದಲ್ಲಿ ಮಿಲಿಟರಿ ಸಮವಸ್ತ್ರ ಹಾಕಿಕೊಂಡು ಸಂಶಯಾಸ್ಪದವಾಗಿ ಓಡಾಡುತ್ತಿದ್ದ‌. ಈ ವೇಳೆ ಈತನನ್ನು ಗಮನಿಸಿದ್ದ ಕರ್ತವ್ಯ ನಿರತ ಮಿಲಿಟರಿ ಅಧಿಕಾರಿಗಳು, ಆತನನ್ನು ಹಿಡಿದು ವಿಚಾರಿಸಿದಾಗ ಯಾವುದೇ ಐಡಿ ಕಾರ್ಡ್ ತೋರಿಸಿಲ್ಲ. ಆಗ ಆರೋಪಿ ಮಂಜುನಾಥ್ ಪಾಟೀಲ್‌ನನ್ನು ಹಿಡಿದು ಕ್ಯಾಂಪ್ ಪೊಲೀಸರಿಗೆ ಒಪ್ಪಿಸಿದ್ದಾರೆ‌.

ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಈತನ ದುಷ್ಕೃತ್ಯ ಬಯಲಾಗಿದೆ. ಭಾರತೀಯ ಸೇನೆಗೆ ಸಂಬಂಧಿಸಿದ ವಿಚಾರವಾಗಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕ್ಯಾಂಪ್ ಠಾಣೆ ಪೊಲೀಸರು, ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.

ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿಯ ಕ್ರೈಂ ವಿಭಾಗದ ಡಿಸಿಪಿ ವಿಕ್ರಂ ಆಮ್ಟೆ, ಪ್ರಾಥಮಿಕ ಮಾಹಿತಿ ಪ್ರಕಾರ ಐದು ಜನರನ್ನು ಮದುವೆಯಾಗಿದ್ದಾನೆ. ಮದುವೆಯಾಗಲು ಹಲವು ಮನೆಗಳಿಗೆ ಹೋಗಿ ಹುಡುಗಿಯರನ್ನು ನೋಡಿಕೊಂಡು ಬಂದ ಮಾಹಿತಿ ಇದೆ.

ಈತನ ವಿರುದ್ಧ ವಿಜಯಪುರ, ಇಂಡಿ, ಸೂರತ್ಕಲ್, ರಾಯಚೂರು ಜಿಲ್ಲೆಯ ಮಸ್ಕಿ, ಲಿಂಗಸಗೂರಿನಲ್ಲಿ ಒಟ್ಟು ಐದು ಕೇಸ್ ದಾಖಲಾಗಿವೆ‌‌‌.‌ ಹಲವು ಜನ ಈತನಿಂದ ಮೋಸ ಹೋಗಿದ್ದರ ಬಗ್ಗೆ ಮಾಹಿತಿ ಕಲೆಹಾಕಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Last Updated : Nov 8, 2020, 5:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.