ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ಸ್ಟೋನ್ ಕ್ರಷರ್ ಘಟಕವೊಂದರಲ್ಲಿದ್ದ ಅಪಾರ ಪ್ರಮಾಣದ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮುರಗೋಡ ಪೊಲೀಸರು, ಸತ್ತಿಗೇರಿ ಗ್ರಾಮದ ಸಾಯಿನಾಥ ಸ್ಟೋನ್ ಕ್ರಷರ್ ಶೆಡ್ನಲ್ಲಿದ್ದ ನಾಲ್ಕು ಬಾಕ್ಸ್ ಜಿಲೆಟಿನ್ ಕಡ್ಡಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಎಂಟು ಬಂಡಲ್ ಕೇಬಲ್, ಒಂದು ಬ್ಲಾಸ್ಟಿಂಗ್ ಚಾರ್ಜರ್ ಬ್ಯಾಟರಿ ಜಪ್ತಿ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೋನ್ ಕ್ರಷರ್ ಮಾಲೀಕ ಬಸವರಾಜ್ ಪಟ್ಟಣಶೆಟ್ಟಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.