ETV Bharat / state

ಈಶ್ವರಪ್ಪನವರಷ್ಟು ಒಳ್ಳೆಯ ಮನುಷ್ಯ ಯಾರೂ ಇಲ್ಲ: ರಮೇಶ್ ಜಾರಕಿಹೊಳಿ

ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಬಿಎಸ್​ವೈ ಪರ ಬ್ಯಾಟಿಂಗ್ ಮಾಡಿದರು. ಇದೇ ವೇಳೆ ಸಚಿವ ಈಶ್ವರಪ್ಪ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದರು.

Ramesh Jarakiholi reaction
ಮಾಜಿ ಸಚಿವ ರಮೇಶ್ ಜಾರಕಿಹೊಳಿ
author img

By

Published : Jun 17, 2021, 12:43 PM IST

ಬೆಳಗಾವಿ: ನಾಯಕತ್ವ ಬದಲಾವಣೆ ವಿಚಾರವಾಗಿ ಮೌನ ಮುರಿದ ಮಾಜಿ ಸಚಿವ ರಮೇಶ್ ‌ಜಾರಕಿಹೊಳಿ, ಯಡಿಯೂರಪ್ಪನವರೇ ಮುಂದಿನ ಎರಡೂವರೆ ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ. ಗೋಕಾಕ್​​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

ಯಡಿಯೂರಪ್ಪ, ಅಮಿತ್ ಶಾ ಅವರನ್ನು ನಂಬಿ ನಾವು ಬಿಜೆಪಿಗೆ ಬಂದಿದೇವೆ. ಬಿಎಸ್‌ವೈ ಸಿಎಂ ಆಗಿ ಮುಂದುವರಿಯುತ್ತಾರೆ.‌ ಕೆಲವು ಶಾಸಕರಷ್ಟೇ ಅವರ ನಾಯಕತ್ವಕ್ಕೆ ಅಪಸ್ವರ ಎತ್ತಿದ್ದಾರೆ. ಬಿಜೆಪಿಯ ಎಲ್ಲಾ ಶಾಸಕರು ಒಂದು ಕುಟುಂಬ ಇದ್ದ ಹಾಗೆ. ಒಬ್ಬರು ಸಿಟ್ಟಾಗ್ತಾರೆ, ಒಬ್ಬರು ಬೇಜಾರಾಗ್ತಾರೆ. ಎಲ್ಲರನ್ನೂ ಕರೆದು ಮಾತನಾಡಿಸಿ ಸಮಸ್ಯೆ ಬಗೆಹರಿಸಲು ಯಡಿಯೂರಪ್ಪನವರಿಗೆ ಮನವಿ ಮಾಡುತ್ತೇನೆ ಎಂದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ

ವಿರೋಧ ಪಕ್ಷದವರಿಗೆ ಬೇರೆ ಕೆಲಸ ಇಲ್ಲ. ಬರೀ ನಮ್ಮ ವಿರುದ್ಧ ಮಾತನಾಡುವುದೇ ಆಗಿದೆ. ಜೂನ್ 18ರ ನಂತರ ಹೊಸ ಯಡಿಯೂರಪ್ಪನವರಾಗಿ ಕೆಲಸ ಮಾಡುತ್ತಾರೆ. ಸಿ.ಪಿ ಯೋಗೇಶ್ವರ್ ಇವತ್ತಿಗೂ ನನ್ನ ಮಿತ್ರ, ನಾನೇನು ಅವನನ್ನು ಭೇಟಿಯಾಗಿಲ್ಲ. ನಮ್ಮ 20 ಶಾಸಕ ಮಿತ್ರರನ್ನು ಒಗ್ಗೂಡಿಸುವಲ್ಲಿ ಯೋಗೇಶ್ವರ್ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ದಯವಿಟ್ಟು ಏನಾದರೂ ತಪ್ಪು ಗ್ರಹಿಕೆ ಇದ್ದರೆ ಸಿಎಂ ಜೊತೆ ಚರ್ಚಿಸಿ ಮುಂದುವರೆಯುವುದು ಒಳ್ಳೆಯದು ಎಂದು ಸಚಿವ ಸಿ‌.ಪಿ ಯೋಗೇಶ್ವರ್‌ಗೆ ರಮೇಶ್​ ಜಾರಕಿಹೊಳಿ ಸಲಹೆ ನೀಡಿದರು.

ಈಶ್ವರಪ್ಪರನ್ನು ತುಳಿಯವ ಯತ್ನ: ಹದಿನೇಳು ಶಾಸಕರು ಬಿಜೆಪಿಗೆ ಬಂದ ಮೇಲೆ ಪಕ್ಷದಲ್ಲಿ ಗೊಂದಲ ಉಂಟಾಗಿದೆ ಎಂಬ ಸಚಿವ ಕೆ.ಎಸ್ ಈಶ್ವರಪ್ಪನವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ‌ನೀಡಿದ ಜಾರಕಿಹೊಳಿ, ಈಶ್ವರಪ್ಪನವರು ಆ ರೀತಿಯ ಮ‌ನುಷ್ಯ ಅಲ್ಲ, ಅವರು ಓಪನ್ ಹಾರ್ಟ್ ಮನುಷ್ಯ, ನನ್ನಂತೆ ಮಾತನಾಡ್ತಾರೆ. ಕೆಲ ಮಾಧ್ಯಮಗಳು ಅವರ ಹೇಳಿಕೆಯನ್ನು ತಿರುಚಿದೆ ಎಂದರು.

ಬಿಜೆಪಿಗೆ 104 ಸೀಟ್ ಬರದೆ ಬಹುಮತ ಬಂದಿದ್ದರೆ ಸಮಸ್ಯೆ ಆಗ್ತಿರಲಿಲ್ಲ ಎಂದು ಈಶ್ವರಪ್ಪನವರು ಹೇಳಿದ್ದಾರೆ. ಆದರೆ, ಅದನ್ನು ಮಾಧ್ಯಮವರು ತೋರಿಸಿಲ್ಲ. ಈಶ್ವರಪ್ಪನವರಷ್ಟು ಒಳ್ಳೆಯ ಮನುಷ್ಯ ಯಾರೂ ಇಲ್ಲ. ವಲಸಿಗ ಶಾಸಕರಿಗೆ ಹೆಚ್ಚು ಮಹತ್ವ ಕೊಟ್ಟವರು ಅವರು ಎಂದ ಜಾರಕಿಹೊಳಿ, ನಿಮ್ಮ ಉಪಕಾರದಿಂದ ಈ ಖುರ್ಚಿ ಮೇಲೆ ಕುಂತಿದ್ದೀನಿ,. ನಿಮ್ಮ ಋಣ ತೀರಿಸಲು ಆಗುವುದಿಲ್ಲ ಎಂದು ಈಶ್ವರಪ್ಪರನ್ನು ಕೊಂಡಾಡಿದರು. ಕೆಲ ಮಾಧ್ಯಮಗಳು ಹಿಂದುಳಿದ ಸಮುದಾಯದ ನಾಯಕನನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಚಿವ ಈಶ್ವರಪ್ಪ ನಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.