ETV Bharat / state

ಅಥಣಿ: ರಾಜ್ಯ ಹೆದ್ದಾರಿ ರಸ್ತೆ ವಿಭಜಕದ ಸ್ವಚ್ಚತಾ ಕಾರ್ಯ ಆರಂಭ

'ರಸ್ತೆ ವಿಭಜಕಗಳ ನಡುವೆ ಬೆಳೆದ ಹುಲ್ಲುಗಳು ಲಕ್ಷ್ಮಣ ಸವದಿ ಸ್ವ ಕ್ಷೇತ್ರದ ಅಂದಕ್ಕೆ ಕುತ್ತು 'ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವರದಿ ಬಿತ್ತರಿಸುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

Athani
ರಸ್ತೆ ವಿಭಜಕದ ಸ್ವಚ್ಚತಾ ಕಾರ್ಯ
author img

By

Published : Aug 2, 2020, 7:58 PM IST

ಅಥಣಿ: ನಗರದಿಂದ ಮೀರಜ್‌ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ವಿಭಜಕದ ಮೇಲೆ ಬೆಳೆದಿದ್ದ ಹುಲ್ಲು, ಕಸ, ಕಡ್ಡಿಗಳನ್ನು ಗುತ್ತಿಗೆದಾರ ರಾಜು ಆಲಬಾಳ ಅವರು ಕಾರ್ಮಿಕರ ಸಹಾಯದಿಂದ ತೆರವುಗೊಳಿಸಿ ವಿಭಜಕವನ್ನು ಸ್ವಚ್ಛಗೊಳಿಸಿದರು.

ಆರಂಭಗೊಂಡ ರಸ್ತೆ ವಿಭಜಕದ ಸ್ವಚ್ಛತಾ ಕಾರ್ಯ

ಈ ಕುರಿತು ಮಾತನಾಡಿದ ರಾಜು, ಮಳೆಗಾಲದ ವೇಳೆ ಆಲಬಾಳದಲ್ಲಿ ಕಸ ಬೆಳೆಯುವುದು ಸಹಜ. ಈ ಬಾರಿ ಕೊರೊನಾದಿಂದಾಗಿ ಕಸ ತೆಗೆಯುವುದು ಸ್ವಲ್ಪ ತಡವಾಗಿತ್ತು. ಈ ಕುರಿತು ಈಟಿವಿ ಭಾರತದಲ್ಲಿ ಪ್ರಕಟವಾದ ವರದಿಯನ್ನು ನೋಡಿ ಕಾರ್ಯೋನ್ಮುಖರಾಗಿ ಮೂರು ದಿನದಿಂದ ಸ್ವಚ್ಛ ಮಾಡುತ್ತಿದ್ದೇವೆ. ವರದಿ ಮೂಲಕ ನಮ್ಮನ್ನು ಎಚ್ಚರಿಸಿದ ಈಟಿವಿ ಭಾರತಕ್ಕೆ ಧನ್ಯವಾದ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.