ETV Bharat / state

ಮಾಸ್ಕ್​ ಧರಿಸಿದ್ರೆ ಮಾತ್ರ ಅಥಣಿ ತಹಶಿಲ್ದಾರ್ ಕಚೇರಿಗೆ ಪ್ರವೇಶ:ಇದು ಈಟಿವಿ ಭಾರತ ಫಲಶೃತಿ

ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಅಥಣಿ ತಹಶಿಲ್ದಾರ್ ಕಚೇರಿ ಒಳಗೆ ಪ್ರವೇಶಕ್ಕೆ ದೇಹದ ಉಷ್ಣತೆ ತಪಾಸಣೆ ನಡೆಸಿ ಮಾಸ್ಕ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.

dsdsd
ಮಾಸ್ಕ್​ ಧರಿಸಿದ್ರೆ ಮಾತ್ರ ಅಥಣಿ ತಹಶಿಲ್ದಾರ್ ಕಚೇರಿಗೆ ಪ್ರವೇಶ
author img

By

Published : Jun 26, 2020, 6:54 PM IST

ಅಥಣಿ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕರು ಕೆಲಸದ ನಿಮಿತ್ತ ನಿತ್ಯ ಭೇಟಿ ಕೊಡುವುದರಿಂದ ಕೊರೊನಾ ಮುಂಜಾಗ್ರತ ಕ್ರಮವಾಗಿ ದೇಹದ ಉಷ್ಣತೆ ಪರೀಕ್ಷಿಸಿ ಹಾಗೂ ಮಾಸ್ಕ್ ಹಾಕಿದರೆ ಮಾತ್ರ ಕಚೇರಿ ಒಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಾಸ್ಕ್​ ಧರಿಸಿದ್ರೆ ಮಾತ್ರ ಅಥಣಿ ತಹಶಿಲ್ದಾರ್ ಕಚೇರಿಗೆ ಪ್ರವೇಶ

ಇದಕ್ಕೂ ಮುನ್ನ ಸೌಧದಲ್ಲಿ ಕೊರೊನಾ ವೈರಸ್ ಭಯವಿಲ್ಲದೆ ಜನಜಂಗುಳಿ ಸೇರುತ್ತಿರುವುದರಿಂದ ಜನರಲ್ಲಿ ಆತಂಕ ಮೂಡಿಸಿತ್ತು. ಈಗ ಅಧಿಕಾರಿಗಳು ಎಚ್ಚೆತ್ತುಕೊಂಡು ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಮುಖ್ಯ ದ್ವಾರದಲ್ಲಿ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದಾರೆ. ಈಗ ಯಾವುದೇ ಆತಂಕ ಇಲ್ಲದೆ ಜನಸಾಮಾನ್ಯರು ಕಚೇರಿಗೆ ಭೇಟಿ ನೀಡುತ್ತಿದ್ದಾರೆ.

ಈ ಹಿಂದೆ ಅಥಣಿಯ ಮಿನಿ ವಿಧಾನಸೌಧದಲ್ಲಿ ಕೊರೊನಾ ನಿರ್ಲಕ್ಷ್ಯದ ಬಗ್ಗೆ "ಕೋವಿಡ್​ ಭೀತಿ ಇದ್ದರೂ ಅಥಣಿ ಮಿನಿ ವಿಧಾನಸೌಧದಲ್ಲಿಲ್ಲ ಮುಂಜಾಗ್ರತಾ ಕ್ರಮ" ಎಂಬ ಶೀರ್ಷಿಕೆ ಅಡಿ ಈಟಿವಿ ಭಾರತ ವರದಿ ಬಿತ್ತರಿಸಿ ಅಧಿಕಾರಿಗಳ ಗಮನಕ್ಕೂ ತಂದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.