ETV Bharat / state

ಶಾಲೆ, ನಡಿಬೇಕೋ, ಬೇಡ್ವೋ ಎಂಬ ಶಿಕ್ಷಣ ಸಚಿವರ ಪ್ರಶ್ನೆಗೆ ಮಕ್ಕಳ ಪ್ರತಿಕ್ರಿಯೆ ಏನು? - ಎಲ್ಲ ಶಿಕ್ಷಕರಿಗೂ ಶೀಘ್ರವೇ ಲಸಿಕೆ

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಂದು ಬೆಳಗಾವಿಯ ಹಲವು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.

ಬಿ.ಸಿ.ನಾಗೇಶ್
ಬಿ.ಸಿ.ನಾಗೇಶ್
author img

By

Published : Aug 26, 2021, 3:53 PM IST

ಬೆಳಗಾವಿ: ರಾಜ್ಯಾದ್ಯಂತ ಪ್ರೌಢಶಾಲೆಗಳು ಆರಂಭವಾಗಿವೆ. ಈ ಹಿನ್ನೆಲೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬೆಳಗಾವಿ ಜಿಲ್ಲೆ ಕಿತ್ತೂರು ಶಾಲೆಗೆ ದಿಢೀರ್ ಭೇಟಿ ನೀಡಿದರು‌.

ಕಿತ್ತೂರು ಶಾಲೆಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ

ಪಟ್ಟಣದ ಬಿ.ಜಿ.ಹೈಸ್ಕೂಲ್‌ಗೆ ಭೇಟಿ ನೀಡಿದ ಸಚಿವ, ಶಾಲೆ ಆರಂಭಿಸಿರುವ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು. ಈ ವೇಳೆ 'ಶಾಲೆ ನಡೆಯಬೇಕೋ? ಬೇಡವೋ?' ಎಂಬ ಸಚಿವರ ಪ್ರಶ್ನೆಗೆ ಮಕ್ಕಳು ನಡೆಯಬೇಕು ಸರ್​ ಎಂದರು. ಶಾಲೆ ನಡೆಯಬೇಕಂದ್ರೆ‌ ನೀವು ಏನು ಮಾಡಬೇಕೆಂದು ಸಚಿವರು ಮರು ಪ್ರಶ್ನೆ ಹಾಕಿದಾಗ, 'ಮಾಸ್ಕ್ ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು' ಅಂತಾ ವಿದ್ಯಾರ್ಥಿಗಳು ಉತ್ತರಿಸಿದರು.

ಬಳಿಕ ಕಿತ್ತೂರು ಸೈನಿಕ ಶಾಲೆ, ಕಾದ್ರೊಳ್ಳಿ ಗ್ರಾಮದ ಪ್ರೌಢಶಾಲೆಗೆ ಭೇಟಿ ನೀಡಿದ ಸಚಿವರು ಕೆಲಕಾ ಶಿಕ್ಷಕರು ಹಾಗೂ ಮಕ್ಕಳ ಜತೆ ಮಾತುಕತೆ ನಡೆಸಿದರು. ಸಚಿವರಿಗೆ ಕಿತ್ತೂರು ಬಿಜೆಪಿ ಶಾಸಕ ಮಹಾಂತೇಶ ದೊಡಗೌಡರ ಸಾಥ್ ನೀಡಿದರು.

ಎಲ್ಲ ಶಿಕ್ಷಕರಿಗೂ ಶೀಘ್ರವೇ ಲಸಿಕೆ

ಶಾಲೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.85 ರಿಂದ 90 ರಷ್ಟು ಶಿಕ್ಷಕರಿಗೆ ಲಸಿಕೆ ನೀಡಲಾಗಿದೆ. ಉಳಿದ ಶೇ 10 ರಿಂದ 15 ರಷ್ಟು ಶಿಕ್ಷಕರಿಗೆ ಈ ತಿಂಗಳು ಲಸಿಕೆ ನೀಡಲಾಗುವುದು. ಲಸಿಕೆ ಪಡೆಯದ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವಂತಿಲ್ಲ ಎಂಬ ನಿಯಮ ಮಾಡಲಾಗಿದೆ.

ಪಾಠ ಮಾಡುವುದಿಲ್ಲ ಎಂಬ ಕಾರಣಕ್ಕೆ ಶಾಲೆಗೆ ಬಾರದ ಶಿಕ್ಷಕರಿಗೆ ಆ ದಿನ ರಜೆ ಎಂದು ಪರಿಗಣಿಸಲಾಗುವುದು. ರಾಜ್ಯದ ಸಾಕಷ್ಟು ತಾಲೂಕುಗಳಲ್ಲಿ ಶೇ. 100 ರಷ್ಟು ಶಿಕ್ಷಕರು ಲಸಿಕೆ ಪಡೆದಿದ್ದಾರೆ. ಇನ್ನುಳಿದ ಶಿಕ್ಷಕರಿಗೂ ಲಸಿಕೆ ನೀಡಲು ಸರ್ಕಾರ ಕ್ರಮ ವಹಿಸಿದೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿ ತಲೆ ಮೇಲೆ ಸಿಲಿಂಡರ್‌ ಹೊತ್ತಿದ್ದವರು ಈಗ ಎಲ್ಲಿದ್ದಾರೆ..? : ರಾಮಲಿಂಗಾರೆಡ್ಡಿ

ರಾಜ್ಯದ ಶೇ. 50 ರಷ್ಟು ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಗಿದೆ. 9 ಹಾಗೂ 10 ನೇ ತರಗತಿಯ ಮಕ್ಕಳಿಗೆ ಪೂರ್ಣ ಪ್ರಮಾಣದ ಪುಸ್ತಕಗಳ ಲಭ್ಯತೆ ಇದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಪುಸ್ತಕ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ.

ಸೆಪ್ಟೆಂಬರ್ 15 ರೊಳಗೆ ಎಲ್ಲ ಶಾಲೆಗಳಿಗೆ ಶೇ. 100 ರಷ್ಟು ಪುಸ್ತಕ ‌ವಿತರಣೆ ಆಗಲಿದೆ. 1ರಿಂದ 8 ನೇ ತರಗತಿಗಳ ಆರಂಭದ ಬಗ್ಗೆ ಆಗಸ್ಟ್ 30ಕ್ಕೆ ಮಹತ್ವದ ಸಭೆ ಇದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.