ಚಿಕ್ಕೋಡಿ : ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕೊರೊನಾ ಸೋಂಕು ದೃಢಪಟ್ಟವರ ಸಂಖೈ ಏಳು ಮಂದಿ ಇರುವುದರಿಂದ ಕುಡಚಿ ಪಟ್ಟಣದಲ್ಲಿ ಕಟ್ಟೆಚ್ಚರವಹಿಸಲಾಗಿದೆ ಎಂದು ಡಿವೈಎಸ್‌ಪಿ ಎಸ್ ವಿ ಗಿರೀಶ್ ಹೇಳಿದ್ದಾರೆ.
ಪಟ್ಟಣದಲ್ಲಿ ಲಾಕ್‌ಡೌನ್ ಇದ್ದರೂ ಕೂಡ ಜನ ಸಾಮಾಜಿಕ ಅಂತರ ಕಾಯ್ದುಕೂಳ್ಳದೆ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹೈಅಲಟ್೯ ಘೋಷಿಸಿ ಡ್ರೋನ್ ಕ್ಯಾಮೆರಾದ ಮೂಲಕ ಹದ್ದಿನ ಕಣ್ಣಿಡಲಾಗಿದೆ. ಕುಡಚಿ ಪಟ್ಟಣದಲ್ಲಿ ನಾಲ್ಕು ಕೊರೊನಾ ಪ್ರಕರಣಗಳ ಜೊತೆಗೆ ಮತ್ತೆ ಮೂರು ಹೊಸ ಪ್ರಕರಣ ಸೇರಿರುವ ಹಿನ್ನೆಲೆಯಿಂದ ಪಟ್ಟಣವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಆದರೂ ಕೂಡ ಕೆಲವೆಡೆ ಜನ ಹೂರಗೆ ತಿರುಗಾಡುತ್ತಿರುವುದು ಡ್ರೋನ್ ಕ್ಯಾಮೆರಾದಲ್ಲಿ ಕಂಡು ಬಂದಿದೆ. ಅಂಥವರ ಮೇಲೆ ಕಾನೂನು ಕ್ರಮ ಜರಗಿಸಲಾಗುವುದು ಎಂದರು.
ಕುಡಚಿ ಪಟ್ಟಣ 3 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ (ಕಂಟೈನ್ಮೆಂಟ್ ಝೋನ್) ಪ್ರದೇಶ ಮತ್ತು ನಿಷೇಧಿತ ಪ್ರದೇಶದಿಂದ ಹೂರಗಿನ 2 ಕಿಮೀ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿದ್ದರಿಂದ ಜನ ರಸ್ತೆಗಿಳಿಯಬಾರದೆಂದು ಕರೆ ನೀಡಿದರು.
ಜನರಿಗೆ ತೊಂದರೆಯಾಗಬಾರದೆಂದು ಪಟ್ಟಣದ 23 ವಾರ್ಡ್ಗಳಲ್ಲಿ ಪ್ರತಿ ವಾರ್ಡಿಗೆ 20 ಸ್ವಯಂ ಸೇವಕರನ್ನ ನೇಮಿಸಿ ಅವರ ಮುಖಾಂತರ ಜನರಿಗೆ ವಾರದಲ್ಲಿ 2 ದಿನ ಅಗತ್ಯ ದಿನಸಿ ವಸ್ತುಗಳನ್ನು ತಲುಪಿಸುವ ಕಾರ್ಯ ರೂಪಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.