ETV Bharat / state

ಚಂದ್ರಕಾಂತ ವಿರುದ್ಧ ರಾಜಕೀಯ ಮಾಡಿಲ್ಲ: ಶಾಸಕ ದುರ್ಯೋಧನ ಐಹೊಳೆ ಸ್ಪಷ್ಟನೆ

ಕಂಕಣವಾಡಿ ಗೈರಾಣ ಜಾಗದಿಂದ ಪ್ರಾರಂಭವಾದ ಹಾವು ಮುಂಗುಸಿ ಜಗಳ ಈಗ ಬೀದಿಗೆ ಬಂದು ನಿಂತಿದೆ. ಭಜಂತ್ರಿ ಅವರ ವರ್ಗಾವಣೆಗೆ ಮೂಲ ಕಾರಣ ಕೋವಿಡ್‌ನಲ್ಲಿ ಭಜಂತ್ರಿ ಅವರು ಭ್ರಷ್ಟಾಚಾರ ಮಾಡಿರುವುದು. ಕೆಳಗಿನ ಅಧಿಕಾರಿಗಳಿಗೆ ಅಧಿಕಾರ ಕೊಡದೆ ಇವರೇ ಆಡಳಿತ ನಡೆಸಿರುವುದು ಕಾರಣ ಎಂದು ಶಾಸಕ ದುರ್ಯೋಧನ ಐಹೊಳೆ ತಹಶೀಲ್ದಾರ್​ ವರ್ಗಾವಣೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.

Duryodhana Ihole
ದುರ್ಯೋಧನ ಐಹೊಳೆ
author img

By

Published : Jul 22, 2020, 1:15 PM IST

Updated : Jul 22, 2020, 1:29 PM IST

ಚಿಕ್ಕೋಡಿ(ಬೆಳಗಾವಿ): ರಾಯಬಾಗ ತಹಶೀಲ್ದಾರ್​ ಹುದ್ದೆಯಿಂದ ವರ್ಗಾವಣೆಯಾದ ಚಂದ್ರಕಾಂತ ಭಜಂತ್ರಿ ಅವರ ವಿರುದ್ಧ ಯಾವುದೇ ರೀತಿ ರಾಜಕೀಯ ಮಾಡಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಶಾಸಕ ದುರ್ಯೋಧನ ಐಹೊಳೆ

ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಬಾಡಿಗೆ ಪಡೆದ ಮನೆಯನ್ನು ಶಾಸಕ ಐಹೊಳೆ ಅವರು ತಮ್ಮ ರಾಜಕೀಯ ಕುತಂತ್ರದಿಂದ ಬಿಡಿಸಿದ್ದಾರೆ ಎಂದು ರಾಯಬಾಗದಿಂದ ವರ್ಗಾವಣೆಯಾದ ತಹಶೀಲ್ದಾರ್​​ ಚಂದ್ರಕಾಂತ ಭಜಂತ್ರಿ ಅವರು ನೇರವಾಗಿ ಆರೋಪಿಸಿದ್ದಾರೆ.

ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಶಾಸಕ ಐಹೊಳೆ ಇದು ಸತ್ಯಕ್ಕೆ ದೂರವಾದ ಮಾತು, ನಾನೇಕೆ ಆ ಕೆಲಸ ಮಾಡಲು ಹೋಗಲಿ. ಈಗಾಗಲೇ ಚೆನ್ನಮ್ಮ ಹಾಸ್ಟೆಲನ್ನು ಕೋವಿಡ್ ಸೆಂಟರ್ ಮಾಡಿದ್ದಾರೆ. ಅಲ್ಲಿ 23 ರೋಗಿಗಳು ಇದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು 500 ಬೆಡ್ ರೆಡಿ ಮಾಡುವಂತೆ ಆದೇಶಿಸಿದ್ದಾರೆ. ಈಗ 85 ಬೆಡ್ ರೆಡಿ‌ ಮಾಡಿದ್ದು, ಇನ್ನು 415 ಬೆಡ್‌ಗಳನ್ನು ರೆಡಿ ಮಾಡಬೇಕಿದೆ ಎಂದರು.

ವೈದ್ಯರಿಗೆ ಇರಲಿಕ್ಕೆ ಕೋಣೆಗಳಿಲ್ಲ ಅದಕ್ಕಾಗಿ ನಿನ್ನೆ ಜಿಲ್ಲಾಧಿಕಾರಿಗಳು ಕೋಣೆ ಖಾಲಿ‌ ಮಾಡಲು ಆದೇಶಿಸಿದ್ದಾರೆ. ನಾನು ಭಜಂತ್ರಿ ಅವರ ಮೇಲೆ ಒತ್ತಡ ಹಾಕಿಲ್ಲ ಎಂದರು. ಭಜಂತ್ರಿ ಅವರು ನಿಮ್ಮ ಮೇಲೆ ಆರೋಪ ಮಾಡಿದ ಕಾರಣಕ್ಕೆ ಪ್ರತಿಕ್ರಿಯಿಸಿದ ಅವರು, ನಾನೇ ಕರೆದುಕೊಂಡು ಬಂದಿದ್ದೇನೆ ಹೀಗಾಗಿ ನನ್ನ ಮೇಲೆ ಪ್ರೀತಿ ಇರಬೇಕು ಎಂದರು.

ಇದನ್ನೂ ಓದಿ:ರಾತ್ರೋರಾತ್ರಿ ತಹಶೀಲ್ದಾರ್​ ಮನೆ ಖಾಲಿ ಮಾಡಿಸಿದ್ರಾ ಶಾಸಕ!?

ಕಂಕಣವಾಡಿ ಗೈರಾಣ ಜಾಗದಿಂದ ಪ್ರಾರಂಭವಾದ ಹಾವು ಮುಂಗುಸಿ ಜಗಳ ಈಗ ಬೀದಿಗೆ ಬಂದು ನಿಂತಿದೆ. ಭಜಂತ್ರಿ ಅವರ ವರ್ಗಾವಣೆಗೆ ಮೂಲ ಕಾರಣ ಕೋವಿಡ್‌ನಲ್ಲಿ ಭಜಂತ್ರಿ ಅವರು ಭ್ರಷ್ಟಾಚಾರ ಮಾಡಿರುವುದು. ಕೆಳಗಿನ ಅಧಿಕಾರಿಗಳಿಗೆ ಅಧಿಕಾರ ಕೊಡದೆ ಅವರು ಆಡಳಿತ ನಡೆಸಿದ್ದಾರೆ. ಇವರು ದಂಡಾಧಿಕಾರಿ ಆದಾಗಿನಿಂದಲೂ ತಹಶೀಲ್ದಾರ್​ ಕ್ವಾಟರ್ಸ‌್​ನಲ್ಲಿ ಇಲ್ಲ. ಕೆಲ ದಿನ ಐಬಿಯಲ್ಲಿ ವಾಸ ಮಾಡಿದ್ದರು. ಆದರೆ ಐಬಿಯಲ್ಲಿ ಕೊರೊನಾ ಪಾಸಿಟಿವ್ ಧೃಡಪಟ್ಟ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮ ಹಾಸ್ಟೆಲ್​ನಲ್ಲಿ ವಾಸವಾಗಿದ್ದಾರೆ. ಈಗ ಈ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಲಾಯಿತು. ಇದರಿಂದ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ. ಭಜಂತ್ರಿ ಅವರ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ ಎಂದು ಹೇಳಿದರು.

ಕೋವಿಡ್​ಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಇರಲು ಕೋಣೆ ಇಲ್ಲ. ಹೀಗಾಗಿ‌ ನಾವು ಅವರನ್ನು ಅಲ್ಲಿಂದ ಬಿಡಿಸಿದ್ದೇವೆ. ಮನೆ ಬಾಡಿಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಜಂತ್ರಿ ಅವರು‌ ಮನೆ ನೋಡಿದ್ದು ನನಗೆ ಗೊತ್ತೇ ಇಲ್ಲ. ಆರೋಪ ಮಾಡುವುದರಲ್ಲಿ ಚಂದ್ರಕಾಂತ ಎತ್ತಿದ ಕೈ, ಹೀಗಾಗಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ನನ್ನ ಮೇಲೆ ಪ್ರೀತಿ ಇದೆ. ಹೀಗಾಗಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಈ ಬಗ್ಗೆ ಎಸ್‌ಡಿಸಿ ಅವರನ್ನ ಕೇಳಿದಾಗ ಚೆಕ್ ಬುಕ್ ಯಾರಿಗೂ ನೀಡಿಲ್ಲ ನನಗೆ ಯಾವುದೇ ಅಧಿಕಾರ ನೀಡಿಲ್ಲ ನನಗೆ ಯಾವುದೇ ಮಾಹಿತಿ‌ ನೀಡಿಲ್ಲ ಎಂದು ಹೇಳಿದ್ದಾರೆ.

ಕುಡಚಿ ಪಟ್ಟಣ ಪಂಚಾಯಿತಿ ಹೆಸರಿನಲ್ಲಿ 10 ಲಕ್ಷ ರೂಪಾಯಿಗಳನ್ನು ಚಂದ್ರಕಾಂತ ಭಜಂತ್ರಿ ಚೆಕ್​ ಮೂಲಕ ಡ್ರಾ ಮಾಡಿದ್ದಾರೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರು ಚಂದ್ರಕಾಂತ ಭಜಂತ್ರಿ ಮೇಲೆ ಆರೋಪಿಸಿದ್ದಾರೆ.

Last Updated : Jul 22, 2020, 1:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.