ಬೆಳಗಾವಿ: ಜನವಸತಿ ಪ್ರದೇಶದಲ್ಲಿ ಕಸ ಸುರಿದು ವಿಂಗಡಣೆ ಮಾಡುವ ಮೂಲಕ ಬೆಳಗಾವಿ ಮಹಾನಗರ ಪಾಲಿಕೆ ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ.
ಜಾಧವ್ ನಗರದಲ್ಲಿ ಪೌರಕಾರ್ಮಿಕರು ಈ ಅವಾಂತರ ಮಾಡಿದ್ದಾರೆ. ಬೆಳಗಾವಿಯ ವಿವಿಧ ಬಡಾವಣೆ, ಆಸ್ಪತ್ರೆಗಳಿಂದ ಪೌರಕಾರ್ಮಿಕರು ಕಸ ಸಂಗ್ರಹಿಸಿದ್ದಾರೆ. ಬಳಿಕ ತ್ಯಾಜ್ಯವನ್ನು ರಸ್ತೆಯ ಪಕ್ಕದಲ್ಲೇ ಸುರಿದು ವಿಂಗಡಣೆ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ಮನೆಗಳಿಗೆ ತ್ಯಾಜ್ಯ ಹಾರಿ ಬರುತ್ತಿದ್ದು, ಮಹಾನಗರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಜನ ಹೈರಾಣಾಗಿದ್ದಾರೆ. ಹಾಗಾಗಿ ಬೆಳಗಾವಿ ಮಹಾನಗರ ಪಾಲಿಕೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.