ನಿಪ್ಪಾಣಿ (ಬೆಳಗಾವಿ): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಬ ಜೊಲ್ಲೆ ಬೂದಿಹಾಳ ಗ್ರಾಮದ ವೇದಗಂಗಾ ನದಿಗೆ ಅಡ್ಡವಾಗಿ ನಿರ್ಮಿಸಿದ ಬಾಂದಾರಕ್ಕೆ ಬಾಗಿನ ಅರ್ಪಿಸಿದರು.
ಬೂದಿಹಾಳ ಬಾಂದಾರದ ಹಿನ್ನೀರಿನಿಂದ ಸುಮಾರು 3 ಸಾವಿರ ಎಕರೆ ಜಮೀನಿಗೆ ನೀರು ಒದಗಿಸಲಾಗಿದೆ. ನಾಲ್ಕು ದಶಕಗಳ ರೈತರ ಕನಸು ನನಸಾಗಿದ್ದು ಸಂತೋಷವಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
'ಮಹಾರಾಷ್ಟ್ರದ ರೈತರಿಗೂ ನೆರವಾಗಿದೆ'
ಕೋವಿಡ್ ಹತೋಟಿಗೆ ಬಂದ ನಂತರ ಕೃಷಿ ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತು ಕಣೇರಿಮಠದ ಕಾಡಸಿದ್ಧೇಶ್ವರ ಸ್ವಾಮೀಜಿಯವರನ್ನು ಕರೆಯಿಸಿ ಬಾಂದಾರದ ಉದ್ಘಾಟನೆ ನೆರವೇರಿಸಲಾಗುವುದು. ಕೋಡಣಿಯಲ್ಲಿ ನಿರ್ಮಿಸಿದ ಬಾಂದಾರದಲ್ಲಿ ಮೂರ್ನಾಲ್ಕು ದಿನಗಳಲ್ಲಿ ಗಂಗಾಪೂಜೆ ನೆರವೇರಿಸಲಾಗುವುದು. ಈ ಬಾಂದಾರಗಳ ಬ್ಯಾಕ್ ವಾಟರ್ದಿಂದಾಗಿ ಕೇವಲ ನನ್ನ ತಾಲ್ಲೂಕುಗಳ ರೈತರಿಗೆ ಅಷ್ಟೇ ಅಲ್ಲದೇ, ಪಕ್ಕದ ಮಹಾರಾಷ್ಟ್ರದ ಕೆಲ ಗ್ರಾಮಗಳ ರೈತರಿಗೂ ನೆರವಾಗುತ್ತಿದೆ. ಈ ಕುರಿತು ಅಲ್ಲಿಯ ರೈತರೂ ಕೂಡ ಕರೆ ಮಾಡಿ ಧನ್ಯವಾದ ಸಲ್ಲಿಸುತ್ತಿದ್ದಾರೆ ಎಂದರು.