ಬೆಳಗಾವಿ: ಭಂಡಗೆಟ್ಟ ಎಮ್ಮೆ ಚರ್ಚಮದಂತಹ ರಾಜ್ಯ ಸರ್ಕಾರಕ್ಕೆ ಉಪಚುನಾವಣೆಯಲ್ಲಿ ಮತದಾರರು ಸರಿಯಾದ ಉತ್ತರ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ದ ಹೇಳಿದರು.
ಕಾಂಗ್ರೆಸ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿ, ಇಲ್ಲಿನವರ ಧ್ವನಿ ಆಗಲೆಂದು ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಲಾಗಿದೆ. ಆದರೆ, ನೆರೆ ಹಾವಳಿಯಿಂದ ಲಕ್ಷಾಂತರ ಜನರು ತೊಂದರೆಗೆ ಸಿಲುಕಿಕೊಂಡಿದ್ದರು. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಸುವರ್ಣಸೌಧದಲ್ಲಿ ಅಧಿವೇಶನವೇ ನಡೆಸಲಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರವೂ ಸಿಗಲಿಲ್ಲ ಎಂದು ಕಿಡಿಕಾರಿದರು.
ಹೀಗೆ ಮಾಡುವುದಿದ್ದರೇ ಬೆಳಗಾವಿಯಲ್ಲಿ ಸುವರ್ಣಸೌಧ ಏತಕ್ಕೆ ಕಟ್ಟಬೇಕು? ಉಪಚುನಾವಣೆಯಲ್ಲಿ ಮತದಾರರು ಭಂಡಗೆಟ್ಟ ಎಮ್ಮೆ ಚರ್ಮದ ಈ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕಿದೆ ಎಂದರು.
ಮಾಜಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಎಲ್ಲ ಜಾತಿ-ಜನಾಂಗದ ಜನರೊಂದಿಗೆ ಸತೀಶ್ ಜಾರಕಿಹೊಳಿ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ಅವರಿಗೆ ಬೆಳಗಾವಿ ಜನತೆ ಮತ ನೀಡಬೇಕು. ಪ್ರಚಾರದ ಮೂಲಕ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಜನರಿಗೆ ಕನಸು, ಭರವಸೆಗಳನ್ನು ಕೊಟ್ಟು ಸಾಕಷ್ಟು ನಂಬಿಕೆ ಹುಟ್ಟಿಸಿದ್ದರು. ನೂರು ದಿನಗಳಲ್ಲಿ ವಿದೇಶದಿಂದ ಕಪ್ಪು ಹಣ ತಂದು ನಿಮ್ಮ ಖಾತೆಗಳಿಗೆ ಹದಿನೈದು ಲಕ್ಷ ಹಾಕುತ್ತೇನೆ ಎಂದಿದ್ದರು. ಆದರೆ, ಅಧಿಕಾರಕ್ಕೆ ಬಂದು ಏಳು ವರ್ಷ ಕಳೆದರೂ ಯಾರೊಬ್ಬರ ಖಾತೆಗೆ ಹಣ ಹಾಕದೆ, ನಮ್ಮ ಜನ್ ಧನ್ ಬ್ಯಾಂಕ್ ಖಾತೆಯಲ್ಲಿ ನಾವು ಇಟ್ಟ ಹಣವನ್ನೇ ಅದಾನಿ, ಅಂಬಾನಿಗೆ ಲಾಭ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ ಎಫೆಕ್ಟ್: ಬಾಡಿಗೆ ಇಲ್ಲದೆ ಆಟೋ ಚಾಲಕರ ಪರದಾಟ
ದೇಶದಲ್ಲಿ ದಿನಸಿ ಪದಾರ್ಥಗಳ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿವೆ. ಬಹುತೇಕ ಅಗತ್ಯ ವಸ್ತುಗಳು ಏರು ಗತ್ತಿಯಲ್ಲಿ ಸಾಗುತ್ತಿವೆ. ರಾವಣ ಇದ್ದ ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ 63 ರೂ. ಇದ್ದಾರೇ ಶ್ರೀರಾಮನ ಭಾರತದಲ್ಲಿ 93 ರೂ.ಗೆ ಏರಿಕೆಯಾಗಿದೆ. ಇದೀಗ ದೇಶದ ಎಲ್ಲ ಜನರಿಗೂ ಮೋದಿ ಆಡಳಿತದ ಕಾರ್ಯವೈಖರಿ ಗೊತ್ತಾಗಿದೆ. ಮೋದಿ ಸರ್ಕಾರದ ವಿರುದ್ಧವಾಗಿ ಸತೀಶ್ ಜಾರಕಿಹೊಳಿ ಪರವಾಗಿ ಮತ ಚಲಾಯಿಸುವ ಮೂಲಕ ಗೆಲ್ಲಿಸಿಕೊಂಡು ಬರಬೇಕು ಎಂದು ಮನವಿ ಮಾಡಿದರು.