ETV Bharat / state

ಉಗ್ರರ ಪರ ಹೇಳಿಕೆ ಕೊಡಲು ನನಗೇನು ತಲೆ ಕೆಟ್ಟಿದೆಯಾ?-ಡಿಕೆಶಿ, ಕ್ಷಮೆ ಕೇಳುವಂತೆ ಸಿ.ಟಿ.ರವಿ ಆಗ್ರಹ - dj halli kj halli inicident

ಈ ರಾಜ್ಯ ಎಲ್ಲ ರೀತಿಯ ಕಳ್ಳತನ ಕೃತ್ಯಗಳನ್ನು ನೋಡಿದೆ, ಆದ್ರೆ ವೋಟ್‌ ಕಳ್ಳತನ ನೋಡಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಬಿಜೆಪಿ ಸರ್ಕಾರವನ್ನು ಟೀಕಿಸಿದರು. ಇದೇ ವೇಳೆ, ಮಂಗಳೂರು ಸ್ಫೋಟ ಪ್ರಕರಣ ಸಂಬಂಧ ನೀಡಿರುವ ಹೇಳಿಕೆಗೆ ಡಿಕೆಶಿ ಕ್ಷಮೆ ಕೇಳಬೇಕೆಂದು ಸಿ.ಟಿ ರವಿ ಒತ್ತಾಯಿಸಿದರು.

what-bothers-me-to-give-a-statement-in-favor-of-terrorists-dk-shivakumar
ಉಗ್ರರ ಪರ ಹೇಳಿಕೆ ಕೊಡಲು ನನಗೇನು ತಲೆಕೆಟ್ಟಿದೆಯಾ?: ಡಿಕೆ ಶಿವಕುಮಾರ್​
author img

By

Published : Dec 27, 2022, 9:39 PM IST

ವಿಧಾನಸಭೆಯಲ್ಲಿ ಮಾತನಾಡಿದ ಡಿಕೆಶಿ

ಬೆಳಗಾವಿ: ಭಯೋತ್ಪಾದಕರ ಪರವಾಗಿ ಹೇಳಿಕೆ ಕೊಡಲು ನನಗೇನು ತಲೆ ಕೆಟ್ಟಿದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿಂದು ಆಕ್ರೋಶ ಹೊರಹಾಕಿದರು. ವೋಟ್ ಕಳ್ಳತನ ವಿಚಾರವಾಗಿ ಮಾತನಾಡುವಾಗ, ಪ್ರಕರಣವನ್ನು ಡಿವಿಯೇಟ್ ಮಾಡಲು ಹೊರಟಿದ್ದಾರೆ ಎಂದು ಹೇಳಿರುವುದಾಗಿ ಅವರು ಸ್ಪಷ್ಟನೆ ನೀಡಿದರು.

ನಾನ್ಯಾಕೆ ಹಾಗೆ ಹೇಳಲಿ, ನನಗೇನು ತಲೆ ಕೆಟ್ಟಿದೆಯಾ?. ನಮಗೂ ಜವಾಬ್ದಾರಿ ಇದೆ, ನಾವು ಭಯೋತ್ಪಾದನೆಗೆ, ನೈತಿಕ ಪೊಲೀಸ್‌ಗಿರಿಗೆ ಬೆಂಬಲ ಕೊಡುವುದಿಲ್ಲ ಎಂದರು.

ಇದಕ್ಕೂ ಮುನ್ನ ಸಿ.ಟಿ.ರವಿ ಅವರಿಗೆ ಉತ್ತರಿಸುತ್ತಾ, ಅದು ಅವರ ಅಜೆಂಡಾ. ಅದಕ್ಕೆ ನನ್ನ ತಕರಾರು ಇಲ್ಲ. ನಾನು ಪಕ್ಷದ ಅಧ್ಯಕ್ಷ. ನಮಗೇ ನಮ್ಮದೇ ಆದ ಆಚಾರ ವಿಚಾರಗಳಿವೆ. ಈ ರಾಜ್ಯದಲ್ಲಿ ಎಲ್ಲ ರೀತಿಯ ಕಳ್ಳತನ ನೋಡಿದ್ದೇವೆ. ಚಪ್ಪಲಿ, ಹಣ, ಒಡವೆ ಕದಿಯೋದನ್ನು ನೋಡಿದ್ದೇವೆ. ಆದರೆ ಓಟ್ ಕಳ್ಳತನ ನೋಡಿಲ್ಲ. ಚಿಲುಮೆ ಸಂಸ್ಥೆಯವರ ಮೂಲಕ ಅಕ್ರಮ ಆಗಿದೆ. ಈ ವಿಚಾರ ಇದ್ದಾಗ ಕುಕ್ಕರ್ ಬ್ಲಾಸ್ಟ್ ಆಗಿದೆ. ನಾವು ಭಯೋತ್ಪಾದಕತೆಯನ್ನು ವಿರೋಧಿಸುತ್ತೇವೆ. ನಾವು ಯಾರಿಗೂ ಬೆಂಬಲ‌ ನೀಡುವುದಿಲ್ಲ ಎಂದು ತಿಳಿಸಿದರು.

ಕುಕ್ಕರ್ ಸ್ಫೋಟ ಆದಾಗ ಅಲ್ಲಿನ‌ ಕಮಿಷನರ್ ಇದರ ಬಗ್ಗೆ ಇನ್ನೂ ಮೂರು ನಾಲ್ಕು ದಿನದಲ್ಲಿ ಗೊತ್ತಾಗಲಿದೆ ಎಂದು ಹೇಳಿಕೆ ಕೊಟ್ಟಿದ್ದರು. ಈ‌ ಮಧ್ಯೆ ಡಿಜಿ ಮತ್ತು ಐಜಿಪಿ, ಇದು ಟೆರರ್ ಅಟ್ಯಾಕ್ ಎಂದು ಹೇಳುತ್ತಾರೆ. ಇದನ್ನು ರಾಜಕೀಯವಾಗಿ ಡಿವಿಯೇಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದೇನೆ ಅಷ್ಟೇ ಎಂದು ಸಮಜಾಯಿಷಿ ನೀಡಿದರು.

ಕ್ಷಮೆ ಯಾಚನೆಗೆ ಸಿ.ಟಿ.ರವಿ ಆಗ್ರಹ: ವಿಧಾನಸಭೆಯಲ್ಲಿ ನಿಯಮ 69ರಡಿ ಭಯೋತ್ಪಾದನೆ ಕುರಿತು ವಿಷಯ ಪ್ರಸ್ತಾಪಿಸಿದ ಅವರು, ಸದನದ ಅತ್ಯಂತ ಹಿರಿಯ ಸದಸ್ಯರೊಬ್ಬರು ಮಂಗಳೂರಿನ‌ ಕುಕ್ಕರ್ ಬ್ಲಾಸ್ಟ್ ಆದಾಗ ಪೊಲೀಸ್ ಅಧಿಕಾರಿಯ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಹೆಂಗ್ರೀ ಭಯೋತ್ಪಾದಕ ಎಂದು ಸರ್ಟಿಫಿಕೇಟ್ ಕೊಟ್ರಿ ಎಂದು ಪ್ರಶ್ನಿಸುತ್ತಾರೆ.

ಅವರ ದೃಷ್ಟಿಯಲ್ಲಿ ಅದು ದೊಡ್ಡ ಬಾಂಬ್ ಸ್ಫೋಟ ಆಗಬೇಕಿತ್ತು. ಹಲವಾರು ಜನ ಪ್ರಾಣ ಕಳೆದುಕೊಳ್ಳಬೇಕಾಗಿತ್ತು. ಆ ಮೇಲೆ ಅವರಿಗೆ ಭಯೋತ್ಪಾದಕ ಎಂದು ಹೇಳಬೇಕಿತ್ತು. ಮತೀಯ ಉನ್ಮಾದದ ಲಾಭ ಬಳಸಿ ಮತದ ಬೆಳೆ ತೆಗೆಯಬೇಕು ಎಂಬ ಮನಸ್ಥಿತಿ ಅದು ರಾಜ್ಯಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿದರು.

ಮತಬ್ಯಾಂಕ್​ ಎಂದು ನೋಡಬೇಡಿ: ಭಯೋತ್ಪಾದಕರನ್ನು ಭಯೋತ್ಪಾದಕರಾಗಿ ಪರಿಗಣಿಸಬೇಕು. ಒಂದು ಮತಕ್ಕೆ ಸೇರಿದವರು ಎಂಬ ಕಾರಣಕ್ಕೆ ಮತಬ್ಯಾಂಕ್ ಎಂದು ನೋಡಬಾರದು. ಇಡೀ ರಾಜ್ಯ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣತೆ ತೋರಿಸಬೇಕು. ನಾವು ಗುರುತಿಸಲು ಅಪ್ಜಲ್ ಗುರು, ಕಸಬ್, ಯಾಸಿನ್ ಬೇಕಿಲ್ಲ. ಇಬ್ರಾಹಿಂ‌ ಸುತಾರ್, ಶಿಶುನಾಳ ಶರೀಫ್, ಅಬ್ದುಲ್ ಕಲಾಂ ಮೂಲಕ ಸಮಾಜವನ್ನು ಗುರುತಿಸಬಹುದು. ಯಾಕೆ ಈ ಮಾನಸಿಕತೆ?. ತಮ್ಮ ಹೇಳಿಕೆಯನ್ನು ವಾಪಾಸು ಪಡೆಯಬೇಕು. ಬೇಷರತ್ ಆಗಿ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಅಗ್ರಹಿಸಿದರು.

ಮತೀಯವಾದಿ ಸಿದ್ದಾಂತ ಭಯೋತ್ಪಾದಕರನ್ನು ರೂಪಿಸುತ್ತಿದೆ: ಒಂದು ಪೋಸ್ಟ್ ಕಾರಣಕ್ಕೆ ಡಿಜಿ ಹಳ್ಳಿ ಹೊತ್ತಿ ಉರಿಯಿತು. ಅವರ ಮಾನಸಿಕತೆ ಘಜ್ನಿ ಮೊಹಮ್ಮದ್ ಆಗಿದೆ. ಘಜ್ನಿ, ಗೋರಿ, ತುಘಲಕ್, ಬಾಬರ್, ಖಿಲ್ಜಿ ಮಾನಸಿಕತೆಯ ಜನ ಡಿಜೆ ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಊರು ಸುಟ್ಟರು. ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಯನ್ನು ವೋಟ್ ಬ್ಯಾಂಕ್ ಆಧಾರದಲ್ಲಿ ನೋಡಬಾರದು. ಮತೀಯವಾದದ ಸಿದ್ಧಾಂತ ಅವರನ್ನು ಭಯೋತ್ಪಾದಕರನ್ನಾಗಿ ಮಾಡುತ್ತಿದೆ. ಅದು ಅಪಾಯಕಾರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಅಕಾಲಿಗಳ ಪ್ರಾಬಲ್ಯ ಮುರಿಯಲೆಂದೇ ಬಿಂದ್ರೇನ್ ವಾಲಾರನ್ನು ಎತ್ತಿ ಕಟ್ಟಲಾಯಿತು. ಅದರಿಂದಾಗಿ ಪಂಜಾಬ್​​ನಲ್ಲಿ ಖಲಿಸ್ತಾನ್ ಹುಟ್ಟಿಕೊಳ್ತು. ತಮಿಳುನಾಡಿನಲ್ಲಿ ಎಲ್ ಟಿಟಿಇ ಪರವಾಗಿ ಮಾತನಾಡುವುದು ಮತ ತರುವಂಥ ವಿಷಯ ಎಂದು ಭಾವಿಸುವ ಮನಸ್ಥಿತಿ ದೇಶಕ್ಕೆ ಅಪಾಯಕಾರಿಯಾಗಿದೆ. ಅದೇ ಮನಸ್ಥಿತಿ ನಮ್ಮ ರಾಜ್ಯದಲ್ಲೂ ಬೆಳೆಯುತ್ತಿದೆ.

ಪಿಎಫ್ಐ ಸ್ಥಾಪನೆಯಾದಾಗ ನಮ್ಮ ದೇಶದ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿ ಅದಕ್ಕೆ ಸಾಕ್ಷಿಯಾಗುತ್ತಾರೆ. ದೇಶವನ್ನು ಬಹುಕಾಲ ಆಳಿದ ಪಕ್ಷವೊಂದು ಅವರನ್ನು ತಮ್ಮ ಪ್ರತಿನಿಧಿಯಾಗಿ ಕಳುಹಿಸಿದ್ದರು. ಅದರಿಂದ ರಾಜಕೀಯ ಲಾಭ ತೆಗೆಯಬಹುದು ಎಂಬ ಮನಸ್ಥಿತಿ. ಆ ಮನಸ್ಥಿತಿ ರಾಜ್ಯಕ್ಕೂ ಬರುತ್ತಿದೆ.

ಅದರಿಂದ ಸಾರ್ವಜನಿಕರ ನೆಮ್ಮದಿ, ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಉಳಿಯಲು ಸಾಧ್ಯವಿಲ್ಲ. ಉಗ್ರ ಅಪ್ಜಲ್ ಗುರು ಪರ ಸಹಿ ಸಂಗ್ರಹ ಮಾಡಲಾಗಿತ್ತು. ಆ ದೆಹಲಿ ಮನಸ್ಥಿತಿ ಈಗ ರಾಜ್ಯಕ್ಕೆ ಬರುತ್ತಿದೆ. ಈ ಮನಸ್ಥಿತಿ ಬಂದರೆ ಕರ್ನಾಟಕ ಸುರಕ್ಷಿತ ರಾಜ್ಯವಾಗಿ ಹೇಗೆ ಉಳಿಯುತ್ತೆ? ಎಂದು ಟೀಕಿಸಿದರು.

ಇದನ್ನೂ ಓದಿ: ಬೊಮ್ಮಾಯಿಗೆ ಪಂಚಮಸಾಲಿಗರ ಮೀಸಲಾತಿ ತಲೆಬಿಸಿ; ಬಿಜೆಪಿ ಸರ್ಕಾರದ ಮುಂದಿರುವ ಲೆಕ್ಕಾಚಾರಗಳೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.