ಬೆಳಗಾವಿ: ಬೆಳಗಾವಿ ಜಿಲ್ಲಾ ಪೊಲೀಸರು ಈ ವರ್ಷ ಖದೀಮರಿಂದ ವಶಪಡಿಸಿಕೊಂಡ ಅಪಾರ ಪ್ರಮಾಣದ ಸ್ವತ್ತುಗಳ ಪ್ರದರ್ಶನ ನಡೆಸಿ ವಾರಸುದಾರರಿಗೆ ಒಪ್ಪಿಸಿದರು.
4.18 ಕೋಟಿ ರೂ ಮೌಲ್ಯದ 8.39 ಕೆಜಿ ಚಿನ್ನಾಭರಣ, 4.91 ಲಕ್ಷ ರೂ ಮೌಲ್ಯದ 7.23 ಕೆಜಿ ಬೆಳ್ಳಿಯ ಆಭರಣ, 1.24 ಕೋಟಿ ರೂ ಮೌಲ್ಯದ 250 ಮೋಟರ್ ಸೈಕಲ್ (ದ್ವಿಚಕ್ರ ವಾಹನ), 3.99 ಕೋಟಿ ಮೌಲ್ಯದ 24 ಮೋಟರ್ ವಾಹನಗಳು (ನಾಲ್ಕು ಚಕ್ರ ವಾಹನ), 59.62 ಲಕ್ಷ ರೂ ಮೌಲ್ಯದ ಮೊಬೈಲ್, 7.47 ಕೋಟಿ ನಗದು ಜಪ್ತಿ ಸೇರಿದಂತೆ ಒಟ್ಟು 17,54 ಕೋಟಿ ರೂ ಮೌಲ್ಯದ ಸ್ವತ್ತುಗಳನ್ನು ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಳ್ಳಲಾಗಿತ್ತು. ಇಂದು ಪಿರ್ಯಾದುದಾರರು ಹಾಗೂ ವಾರಸುದಾರರನ್ನು ಕರೆದಿರುವ ಪೊಲೀಸರು ಅವರ ಸ್ವತ್ತುಗಳನ್ನು ಮರಳಿ ನೀಡಿದರು.
ಮುರಗೋಡ ಠಾಣೆಯಲ್ಲಿ ನಡೆದ ಬ್ಯಾಂಕ್ ದರೋಡೆ, ಎಂಕೆ ಹುಬ್ಬಳ್ಳಿ ಬಳಿ ಚಿನ್ನದ ಉದ್ಯಮಿಗೆ ಹೆದರಿಸಿ ನಗದು ದರೋಡೆ, ಹುಕ್ಕೇರಿ ಪಟ್ಟಣದ ವಿದ್ಯಾ ಜ್ಯುವೆಲರಿ ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಸೇರಿದಂತೆ ಶೇ. 78 ಪ್ರಕರಣಗಳನ್ನು ಬೆಳಗಾವಿ ಜಿಲ್ಲಾ ಪೊಲೀಸರು ಬೇಧಿಸಿದ್ದರು.
ಇದನ್ನೂ ಓದಿ: ನಾನು ಕುಕ್ಕರ್ ಬಾಂಬ್ ಸ್ಫೋಟ ಘಟನೆಯನ್ನು ಸಮರ್ಥಿಸಿಕೊಂಡಿಲ್ಲ: ಡಿ ಕೆ ಶಿವಕುಮಾರ್