ETV Bharat / state

ಬೆಳಗಾವಿಯಲ್ಲಿ ಶೇ 20ರಷ್ಟು ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆ: ಡಿಹೆಚ್ಒ - ಬೆಳಗಾವಿಯಲ್ಲಿ ಕೊರೊನಾ ಹೆಚ್ಚಳ

ಜನವರಿ 2ನೇ ವಾರದ ನಂತರ ಹೆಚ್ಚಿನ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಸದ್ಯ ಶೇ 18-20ರಷ್ಟು ಮಕ್ಕಳಲ್ಲಿ ವೈರಸ್​ ಪತ್ತೆಯಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ 324 ಸೋಂಕಿತ ಮಕ್ಕಳಿದ್ದಾರೆ ಎಂದು ಡಿಹೆಚ್ಒ ಡಾ.ಶಶಿಕಾಂತ ಮುನ್ಯಾಳ ತಿಳಿಸಿದ್ದಾರೆ.

dho-dr-shashikanta-munyala
ಡಿಹೆಚ್ಒ ಡಾ. ಶಶಿಕಾಂತ ಮುನ್ಯಾಳ
author img

By

Published : Jan 17, 2022, 3:26 PM IST

ಬೆಳಗಾವಿ: ಗಡಿ ಜಿಲ್ಲೆಯಲ್ಲಿ ಶೇ 18 ರಿಂದ 20 ರಷ್ಟು ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ ಎಂದು ಡಿಹೆಚ್ಒ ಡಾ. ಶಶಿಕಾಂತ ಮುನ್ಯಾಳ ತಿಳಿಸಿದರು.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3ನೇ ಅಲೆಯಲ್ಲಿ ವೈರಸ್​ ಹೆಚ್ಚುತ್ತಿದ್ದರೂ ಗಂಭೀರ ಸಮಸ್ಯೆ ಯಾರಲ್ಲೂ ಕಂಡುಬಂದಿಲ್ಲ. ಜಿಲ್ಲೆಯ 52 ಸೋಂಕಿತರು ಸರ್ಕಾರಿ-ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಸೋಂಕಿತರೆಲ್ಲರೂ ಹೋಂ ಐಸೊಲೇಷನ್ ಆಗಿದ್ದಾರೆ.

ಸೋಂಕಿತರೆಲ್ಲರೂ ಮನೆಯ ಉಪಚಾರದಲ್ಲೇ ಗುಣಮುಖರಾಗಿದ್ದಾರೆ. ಮಕ್ಕಳಲ್ಲಿ ಸೋಂಕು ಕಾಣಿಸಿದರೂ ಭಯಪಡುವ ಅಗತ್ಯವಿಲ್ಲ. ಮಾರ್ಗಸೂಚಿ ಪ್ರಕಾರ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಕೊಲೆ ಪ್ರಕರಣ: ಜಾಮೀನು ಷರತ್ತು ಸಡಿಲಿಸಿದ ಕೋರ್ಟ್.. ಮಾಜಿ ಸಚಿವ ವಿನಯ್ ಕುಲಕರ್ಣಿಗೆ ರಿಲೀಫ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.