ಬೆಳಗಾವಿ : ಯಾವುದೇ ವಿಷಯಗಳು ಕಾನೂನಿನ ಚೌಕಟ್ಟಿನಲ್ಲಿದ್ದಾಗ ಯಾರಿಗೂ ಆ ಬಗ್ಗೆ ಮಾತನಾಡಲು ಅವಕಾಶ ಇರುವುದಿಲ್ಲ ಎಂದು ವಿಧಾನಸಭೆಯ ಉಪ ಸಭಾಧ್ಯಕ್ಷ ಆನಂದ್ ಮಾಮನಿ ಹೇಳಿದರು.
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಸರ್ಕಾರದ ವಿರುದ್ಧ ಹೆಚ್.ವಿಶ್ವನಾಥ್ ಗರಂ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಒಂದು ವಿಷಯ ಕಾನೂನಿನ ಚೌಕಟ್ಟಿನಲ್ಲಿ ಹೋದಾಗ ಅದರ ಬಗ್ಗೆ ಚರ್ಚೆ ಮಾಡಲು ಯಾರಿಗೂ ಅವಕಾಶ ಇರುವುದಿಲ್ಲ. ಅದಕ್ಕೆ ಕಾನೂನು ಸಚಿವರು, ಕಾನೂನು ಇಲಾಖೆ ಇರುತ್ತದೆ. ಅವರೆಲ್ಲರೂ ಹಾಗೂ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು ಚರ್ಚೆ ನಡೆಸಿ ಕಾನೂನಾತ್ಮಕವಾಗಿ ಸಲಹೆ ತೆಗೆದುಕೊಂಡು ನಿರ್ದಿಷ್ಟ ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವೆ: ಹೆಚ್.ವಿಶ್ವನಾಥ್
ನಾವು-ನೀವೆಲ್ಲಾ ಕಾನೂನು, ಸಂವಿಧಾನದ ತಳಹದಿ ಮೇಲೆ ನಡೆಯುತ್ತಿದ್ದೇವೆ. ಆ ವಿಷಯ ಕೋರ್ಟ್‌ನಲ್ಲಿದ್ದಾಗ ನಾವು ಹೊರಗೆ ಮಾತನಾಡಬಾರದು. ಹೆಚ್.ವಿಶ್ವನಾಥ್ ಅವರನ್ನು ಸಚಿವರ ಪಟ್ಟಿಯಿಂದ ತೆಗೆಸಿದ ಬಗ್ಗೆ ನನಗೆ ಮಾಹಿತಿ ಇಲ್ಲ. ಅದನ್ನ ನಮ್ಮ ಸಿಎಂ ಹಾಗೂ ರಾಜ್ಯದ ನಾಯಕರು ಚರ್ಚೆ ಮಾಡುತ್ತಾರೆ ಎಂದು ಹೇಳಿದರು.