ETV Bharat / bharat

ಕಾರು ಅಪಘಾತದಲ್ಲಿ 6 ಜನ ಮೃತಪಟ್ಟ ಪ್ರಕರಣ: ಬ್ರೇಕ್​ನ ಅಡಿ ನೀರಿನ ಬಾಟಲ್​​​ ಸಿಲುಕಿಕೊಂಡಿದ್ದೇ ಆ್ಯಕ್ಸಿಡೆಂಟ್​​​​​ಗೆ ಕಾರಣ!

ಕಾರಿನ ಬ್ರೇಕ್​ನ ಅಡಿ ನೀರಿನ ಬಾಟಲಿ ಸಿಲುಕಿಕೊಂಡಿದ್ದೇ ಡೆಹ್ರಾಡೂನ್​ ಕಾರು ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೀಡಾದ ಕಾರು
ಅಪಘಾತಕ್ಕೀಡಾದ ಕಾರು (ANI)
author img

By ETV Bharat Karnataka Team

Published : 2 hours ago

ಡೆಹ್ರಾಡೂನ್(ಉತ್ತರಾಖಂಡ): ಡೆಹ್ರಾಡೂನ್​ನಲ್ಲಿ ನವೆಂಬರ್ 12 ರಂದು ಟೊಯೊಟಾ ಇನ್ನೋವಾ ಎಸ್​ಯುವಿ ಕಾರು ನಿಂತಿದ್ದ ಕಂಟೈನರ್​ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದರು. ಕಾರಿನ ಬ್ರೇಕ್​ನ ಅಡಿ ನೀರಿನ ಬಾಟಲಿ ಸಿಲುಕಿಕೊಂಡಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ್ ಸಿಂಗ್, ಅತಿಯಾದ ವೇಗ ಮತ್ತು ವಾಹನದ ಬ್ರೇಕ್ ಕೆಳಗೆ ನೀರಿನ ಬಾಟಲಿ ಸಿಲುಕಿಕೊಂಡಿದ್ದೆ ಅಪಘಾತಕ್ಕೆ ಕಾರಣವಾಗಿರಬಹುದು. ಅಪಘಾತಕ್ಕೂ ಮೊದಲು ಅಪಘಾತಕ್ಕೀಡಾದ ಎಸ್​ಯುವಿ ಕಾರು ಹಾಗೂ ಮತ್ತೊಂದು ಕಾರಿನ ನಡುವೆ ರೇಸಿಂಗ್ ನಡೆಯುತ್ತಿತ್ತು ಎಂಬ ಆರೋಪವನ್ನು ಅವರು ತಳ್ಳಿಹಾಕಿದರು.

ಕಾರು ಅಪಘಾತಕ್ಕೀಡಾದ ಸ್ಥಳದಿಂದ 500 - 700 ಮೀಟರ್ ಹಿಂದೆಯೇ ಅತಿಯಾದ ವೇಗದಲ್ಲಿ ಚಲಿಸುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂದು ಎರಡು ಕಾರುಗಳು ಒಟ್ಟಿಗೆ ವೇಗವಾಗಿ ಹೋಗುತ್ತಿದ್ದನ್ನು ಗಮನಿಸಿದ ಪೊಲೀಸರು, ಕಾರುಗಳ ಮಧ್ಯೆ ರೇಸಿಂಗ್ ನಡೆದಿರಬಹುದು ಎಂದು ಊಹಿಸಿದ್ದರು. ಆದರೆ, ತನಿಖೆಯಲ್ಲಿ ರೇಸಿಂಗ್ ನಡೆದಿರುವುದು ಕಂಡು ಬಂದಿಲ್ಲ. ಪೊಲೀಸರು ಮತ್ತೊಂದು ಕಾರು ಚಾಲಕನನ್ನು ವಿಚಾರಿಸಿದಾಗ ಪರಿಚಯಸ್ಥರನ್ನು ಭೇಟಿ ಮಾಡಲು ಮ್ಯಾಕ್ಸ್ ಆಸ್ಪತ್ರೆಗೆ ಹೋಗುತ್ತಿರುವುದಾಗಿ ತಿಳಿದ್ದಾನೆ. ಒಎನ್‌ಜಿಸಿ ಚೌಕ್ ಬಳಿ ನಿಂತಿದ್ದ ಕಂಟೈನರ್​ಗೆ ಹಿಂದಿನಿಂದ ವೇಗವಾಗಿ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ ಎಂದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಟೊಯೊಟಾ ಕಂಪನಿಯ ಟೆಕ್ನಿಕಲ್​ ತಂಡ ಇನ್ನೋವಾ ಕಾರನ್ನು ಏಕೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂಬುದರ ಕುರಿತು ಪರಿಶೀಲಿಸಿದೆ. ಅತಿ ವೇಗ ಮತ್ತು ವಾಹನದ ಬ್ರೇಕ್​ನ ಅಡಿ ನೀರಿನ ಬಾಟಲಿ ಸಿಲುಕಿಕೊಂಡಿದ್ದೇ ಅಪಘಾತಕ್ಕೆ ಕಾರಣವಾಗಿದೆ ಎಂಬ ವಿಚಾರವನ್ನು ತಂಡವೊಂದು ಗುರುತಿಸಿದೆ ಎಂದು ಅವರು ಹೇಳಿದರು.

ಆಗಿದ್ದೇನು?: ನ.12 ರಂದು ಡೆಹ್ರಾಡೂನ್‌ನ ಒಎನ್‌ಜಿಸಿ ಚೌಕ್ ಬಳಿ ಅತಿವೇಗದಿಂದ ಬಂದ ಎಸ್‌ಯುವಿ ಕಾರು ನಿಂತಿದ್ದ ಕಂಟೈನರ್​ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಆರು ಮಂದಿ ಯುವಕರು ಮೃತಪಟ್ಟಿದ್ದರು ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ತೀವ್ರತೆಗೆ ಎಸ್‌ಯುವಿ ಕಾರು ಸಂಪೂರ್ಣವಾಗಿ ಜಖಂಗೊಂಡಿತ್ತು. ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ನಿವಾಸಿಯಾದ ಕಂಟೈನರ್‌ ಚಾಲಕ ಅಪಘಾತದ ನಂತರ ತಲೆಮರೆಸಿಕೊಂಡಿದ್ದಾನೆ.

ರಸ್ತೆ ಸುರಕ್ಷತಾ ಸಂಶೋಧನಾ ಸಂಸ್ಥೆಯಾದ ಜೆಪಿ ರಿಸರ್ಚ್ ಇಂಡಿಯಾ ಪ್ರೈವೇಟ್ ಲಿಮಿಟೆಡ್​ನ ಅಪಘಾತ ತನಿಖಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಈ ಸಂಸ್ಥೆ ಭಾರತದಲ್ಲಿ ರಸ್ತೆ ಅಪಘಾತಗಳಿಂದ ಉಂಟಾಗುವ ಸಾವುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಅಪಘಾತಗಳ ಬಗ್ಗೆ ತನಿಖೆ ನಡೆಸಿ, ಈ ಡೇಟಾ ಅಧ್ಯಯನ ಮಾಡುತ್ತದೆ.

ಇದನ್ನೂ ಓದಿ: ಶಬರಿಮಲೆಯಿಂದ ಮರಳುವಾಗ ಕರ್ನಾಟಕದ ಯಾತ್ರಾರ್ಥಿಗಳಿದ್ದ ಬಸ್ ಅಪಘಾತ; 27 ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.