ETV Bharat / state

'ವಿವಿಧ ಗೊಲ್ಲ ಸಮುದಾಯಗಳನ್ನು ಗೊಲ್ಲ ಅಭಿವೃದ್ಧಿ ನಿಗಮಕ್ಕೆ ಸೇರಿಸಿ' - Belgaum District Yadava Progressive Association

ರಾಜ್ಯದಲ್ಲಿರುವ ಹಣಬರ, ಯಾದವ, ಕಾಡುಗೊಲ್ಲ, ಊರುಗೊಲ್ಲ ಹಾಗೂ ಗೊಲ್ಲ ಸಮುದಾಯಗಳನ್ನು ಗೊಲ್ಲ ಅಭಿವೃದ್ಧಿ ನಿಗಮದಲ್ಲಿ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಹಣಬರ (ಯಾದವ) ಪ್ರಗತಿಪರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Demand to include Various Golla communities in the Golla Development Corporation
ವಿವಿಧ ಗೊಲ್ಲ ಸಮುದಾಯಗಳನ್ನು ಗೊಲ್ಲ ಅಭಿವೃದ್ಧಿ ನಿಗಮದಲ್ಲಿ ಸೇರ್ಪಡಿಸುವಂತೆ ಆಗ್ರಹ
author img

By

Published : Oct 9, 2020, 5:41 PM IST

ಬೆಳಗಾವಿ: ರಾಜ್ಯದಲ್ಲಿರುವ ಹಣಬರ, ಯಾದವ, ಕಾಡುಗೊಲ್ಲ, ಊರುಗೊಲ್ಲ ಹಾಗೂ ಗೊಲ್ಲ ಸಮುದಾಯಗಳನ್ನು ಗೊಲ್ಲ ಅಭಿವೃದ್ಧಿ ನಿಗಮದಲ್ಲಿ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಹಣಬರ (ಯಾದವ) ಪ್ರಗತಿಪರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕದಲ್ಲಿ ಸಣ್ಣ ಸಣ್ಣ ಸಮುದಾಯಗಳು ಯಾವುದೇ ಸಂವಿಧಾನಿಕ ರಕ್ಷಣೆಯನ್ನು ಪಡೆಯದೇ, ಇತ್ತ ಖಾಸಗಿಯಾಗಿ ಆರ್ಥಿಕ ಸಫಲತೆಯನ್ನು ಕಾಣದೇ, ಉಳ್ಳವರ ದೊಡ್ಡ ಸಮುದಾಯದವರ ಆಶೋತ್ತರಗಳ ಭಾಗವಾದಂತಾಗಿವೆ. ಈ ಸಮುದಾಯಗಳಿಗೂ ಸರ್ಕಾರದ ಸವಲತ್ತುಗಳು ಸಿಗಲು ಗೊಲ್ಲ ನಿಯಮದಲ್ಲಿ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿದರು.

ಶ್ರೀಕೃಷ್ಣ ಪರಮಾತ್ಮನ ವಂಶಜರನ್ನು ಸರ್ಕಾರ ಗೌರವದಿಂದ ನೋಡಿಕೊಂಡರೆ ಎಲ್ಲಾ ಬಹುಸಂಖ್ಯಾತ ಸಮುದಾಯಗಳು ತಮ್ಮನ್ನು ಗೌರವಿಸಿದಂತೆ. ಆದಕಾರಣ ಹಣಬರ, ಯಾದವ, ಗೊಲ್ಲ, ಕಾಡುಗೊಲ್ಲ, ಊರುಗೊಲ್ಲ, ಗೌಳಿ, ಕೃಷ್ಣಗೌಳಿ, ಹನುಮರ, ಅಂತನಬರು, ಗೌಳಿಗೌಡ ಇನ್ನು ಹಲವಾರು ಸಮುದಾಯಗಳನ್ನು ಗೊಲ್ಲ ಅಭಿವೃದ್ಧಿ ನಿಗಮದಲ್ಲಿ ಸೇರ್ಪಡೆ ಮಾಡಬೇಕು. ಜೊತೆಗೆ ಕಾಡುಗೊಲ್ಲ ಬಿಟ್ಟು ಯಾದವ ಗೊಲ್ಲ ಅಭಿವೃದ್ಧಿ ನಿಗಮ ಎಂದು ಮಾರ್ಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.