ETV Bharat / state

ಕಂಬಾರರು - ಬಡಿಗೇರರಿಗೂ ಆರ್ಥಿಕ ಪ್ಯಾಕೇಜ್ ಘೋಷಿಸಿ: ಸಿಎಂಗೆ ಸಮುದಾಯದ ಒತ್ತಾಯ

ಲಾಕ್​​​​ ಡೌನ್​ನಿಂದಾಗಿ ಕಂಬಾರರು ಹಾಗೂ ಬಡಿಗೇರರ ಜೀವನ ‌ದುಸ್ಥರವಾಗಿದ್ದು, ಸರಕಾರ ಈ ಸಮಾಜದವರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅಖಿಲ ಕರ್ನಾಟಕ ಲಿಂಗಾಯತ ಕಂಬಾರ, ಬಡಿಗೇರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

bailahongala
bailahongala
author img

By

Published : May 14, 2020, 11:31 AM IST

ಬೈಲಹೊಂಗಲ (ಬೆಳಗಾವಿ): ಲಾಕ್ ಡೌನ್​ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಲಿಂಗಾಯತ ಕಮ್ಮಾರ (ಕಂಬಾರ) ಹಾಗೂ ವೃತ್ತಿನಿರತ ಬಡಿಗೇರ ಕರಕುಶಲ ಕಾರ್ಮಿಕರಿಗೆ ಸರಕಾರದ ಪ್ಯಾಕೇಜ್‌ನಲ್ಲಿ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಲಿಂಗಾಯತ ಕಂಬಾರ, ಬಡಿಗೇರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ, ಸಂಘದ ರಾಜ್ಯಾಧ್ಯಕ್ಷ ಮಡಿವಾಳಪ್ಪ ಬಡಿಗೇರ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾನಾ ಕುಶಲಕರ್ಮಿಗಳಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈಗಿನ ಪ್ಯಾಕೇಜ್‌ನಲ್ಲಿ ಬಡಗಿತನ, ಕಮ್ಮಾರ ಕೆಲಸ ಮಾಡುತ್ತಿರುವ ಕುಶಲಕರ್ಮಿಗಳಿಗೂ ಆರ್ಥಿಕ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು.

ಲಾಕ್​​​​​ಡೌನ್​ನಿಂದಾಗಿ ಕಂಬಾರಿಕೆ ಮಾಡುವವರ ಜೀವನ ‌ದುಸ್ಥರವಾಗಿದ್ದು, ಸರಕಾರ ಈ ಸಮಾಜವನ್ನು ಪರಿಗಣಿಸಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕಿದೆ ಎಂದರು.

ಉಪಾಧ್ಯಕ್ಷ ಬಸವರಾಜ ಕಂಬಾರ, ಕಾರ್ಯದರ್ಶಿ ಮಡಿವಾಳಪ್ಪ ಕಂಬಾರ, ಮುಖಂಡ ಶಂಕರ ಬಡಿಗೇರ, ಜಿ.ಪಂ. ಸದಸ್ಯ ಶಂಕರ ಮಾಡಲಗಿ, ಉಮೇಶ ಬಡಿಗೇರ, ಬಸವರಾಜ ಬಡಿಗೇರ, ಮಹಾಂತೇಶ ಕಂಬಾರ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.