ETV Bharat / state

ಮೂಲಸೌಕರ್ಯಕ್ಕೆ ಆಗ್ರಹಿಸಿ ರಾಯಬಾಗದ ಕಂಕಣವಾಡಿ ಜನರ  ಪ್ರತಿಭಟನೆ - ಜೈ ಜವಾನ್, ಜೈ ಕಿಸಾನ್ ರೂರಲ್ ಮತ್ತು ಅರ್ಬನ್ ಡೆವಲಪಮೆಂಟ್ ಸೊಸೈಟಿ

ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಯಾವುದೇ ಸೌಲಭ್ಯ ಸೌಕರ್ಯಗಳಿಲ್ಲ. ಹೀಗಾಗಿ ಸರ್ಕಾರ ಮೂಲ ಸೌಲಭ್ಯಗಳನ್ನು ಒಗದಗಿಸಬೇಕು ಎಂದು ಜೈ ಜವಾನ್, ಜೈ ಕಿಸಾನ್ ರೂರಲ್ ಮತ್ತು ಅರ್ಬನ್ ಡೆವಲಪಮೆಂಟ್ ಸೊಸೈಟಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

protest in Belagavi
ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
author img

By

Published : Jul 9, 2020, 11:11 AM IST

ಬೆಳಗಾವಿ: ಕಂಕಣವಾಡಿ ಪಟ್ಟಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಜೈ ಜವಾನ್, ಜೈ ಕಿಸಾನ್ ರೂರಲ್ ಮತ್ತು ಅರ್ಬನ್ ಡೆವಲಪಮೆಂಟ್ ಸೊಸೈಟಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರಭಟನೆ ನಡೆಸಿದ ಸಂಘದ ಪದಾಧಿಕಾರಿಗಳು ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಯಾವುದೇ ಸೌಲಭ್ಯ ಸೌಕರ್ಯಗಳಿಲ್ಲ. ಹೀಗಾಗಿ ಸರ್ಕಾರ ಮೂಲ ಸೌಲಭ್ಯಗಳನ್ನು ಒಗದಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಹಿಂದುಳಿದ ಜನಾಂಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರಿಗೆ, ದೇಶ ಕಾಯುವ ಮಾಜಿ ಹಾಗೂ ಹಾಲಿ ಸೈನಿಕರಿಗೆ ಕಂಕಣವಾಡಿ ಗ್ರಾಮದಲ್ಲಿ 36 ಎಕರೆ ಕಾಯ್ದಿರಿಸಿದ ಜಮೀನಿದೆ. ಇದನ್ನು ಕೆಲವು ರಾಜಕೀಯ ನಾಯಕರು ತಮ್ಮದಾಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸ್ಥಳೀಯ ಎಂಎಲ್ಎ ಹಾಗೂ ಉಪವಿಭಾಗಾಧಿಕಾರಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಗ್ರಾಮದಲ್ಲಿ ಸುಮಾರು 16,000 ಜನಸಂಖ್ಯೆ ಇದ್ದರೂ ಸರ್ಕಾರಿ ಆಸ್ಪತ್ರೆ, ಆಟದ ಮೈದಾನ ಸೇರಿದಂತೆ ಸ್ಮಶಾನದ ಭೂಮಿಯನ್ನು ಬಿಡದೇ ಆಕ್ರಮಿಸಿಕೊಂಡಿದ್ದಾರೆ.‌ ಇಷ್ಟೆಲ್ಲ‌ ಸಮಸ್ಯೆಗಳಿದ್ದರೂ ಇಲ್ಲಿನ ಶಾಸಕರು‌ ಯಾವುದೇ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ. ಇನ್ನು ಜನರ ಸಮಸ್ಯೆಗಳಿಗೆ ಸ್ಪಂದಿಸಿ‌ ಮೂಲ ಸೌಕರ್ಯಗಳನ್ನು ಒದಗಿಸಲು ಮುಂದಾಗಿದ್ದ ರಾಯಬಾಗ ತಹಶೀಲ್ದಾರ್​ ಅವರನ್ನು ವರ್ಗಾವಣೆ ಮಾಡಿಸಲಾಗಿದೆ. ಗ್ರಾಮದಲ್ಲಿರುವ 36 ಎಕರೆ ಹಿಂದುಳಿದವರಿಗೆ ಮೀಸಲಿಡುವ ಮೂಲಕ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.