ಬೆಳಗಾವಿ: ಚಿಗರೆ ಬೇಟೆಗೆ ತೆರಳಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಗೋಲಿಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
![Deer hunting case of belgavi ; 2 are arrested](https://etvbharatimages.akamaized.net/etvbharat/prod-images/10043220_aaaass.jpg)
ಬೆಳಗಾವಿಯ ವಿನಾಯಕ ನಗರದ ಉದ್ಧವ್ ರಾಜೇಂದ್ರ ನಾಯಕ್, ಕಾಕತಿಯ ದೇಸಾಯಿ ಗಲ್ಲಿಯ ಸಾಗರ ಯಲ್ಲೋಜಿ ಪಿಂಗಟೆ ಬಂಧಿತರು.
ಇವರಿಂದ ಡಿಬಿಬಿಎಲ್ ಬಂದೂಕು, 28 ಜೀವಂತ ಗುಂಡುಗಳು, ಎರಡು ಹೆಡ್‌ಟಾರ್ಚ್, ಒಂದು ಚಾಕು, ವಾಕಿಟಾಕಿ, ಸ್ಯಾಂಪಲ್ ಏರ್‌ಗನ್ ಗುಂಡುಗಳು, ಮಾರುತಿ ಸ್ವಿಫ್ಟ್ ಡಿಸೈರ್ ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಓದಿ: ಸಾಲ ಪಡೆದ ಗ್ರಾಹಕರಿಂದ ಕಂಪನಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ವಂಚಕರು
ಮೀಸಲು ಅರಣ್ಯ ಪ್ರದೇಶದಲ್ಲಿ ಚಿಗರೆ ಬೇಟೆಗೆ ಈ ಇಬ್ಬರು ಗುಂಡು ಹಾರಿಸಿದ್ದು, ನಾಲ್ವರ ಪೈಕಿ ಇಬ್ಬರು ಸಿಕ್ಕಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದು, ಆರೋಪಿಗಳಿಗೆ ಶೋಧಕಾರ್ಯ ಮುಂದುವರೆದಿದೆ.