ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನ ಪ್ರಮಾಣ ಇಳಿಮುಖವಾಗಿದೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 18,431 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 3,344 ಕ್ಯೂಸೆಕ್ ನೀರು ಹೀಗೆ ಒಟ್ಟು 21,000 ಕ್ಯೂಸೆಕ್ ಗೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ - 12 ಮಿ.ಮೀ, ನವಜಾ - 15 ಮಿ.ಮೀ, ಮಹಾಬಲೇಶ್ವರ - 11 ಮಿ.ಮೀ, ವಾರಣಾ - 12 ಮಿ.ಮೀ, ಕಾಳಮ್ಮವಾಡಿ - 14 ಮಿ.ಮೀ, ರಾಧಾನಗರಿ - 17 ಮಿ.ಮೀ, ಪಾಟಗಾಂವ - 45 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ.
ಚಿಕ್ಕೋಡಿ ಉಪವಿಭಾಗದಲ್ಲಿ ಚಿಕ್ಕೋಡಿ - 44.2 ಮಿ.ಮೀ, ಅಂಕಲಿ - 48.2 ಮಿ.ಮೀ, ನಾಗರಮುನ್ನೋಳಿ - 21.4 ಮಿ.ಮೀ, ಸದಲಗಾ 13.2 ಮಿ.ಮೀ, ಜೋಡಟ್ಟಿ 11.2 ಮಿ.ಮೀ ಮಳೆಯಾಗಿದ್ದು, ಮಹಾರಾಷ್ಟ್ರಕ್ಕೆ ಹೋಲಿಸಿದರೆ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದು ವರದಿಯಾಗಿದೆ.
ಸದ್ಯ ಕೊಯ್ನಾ ಜಲಾಶಯ 98%, ವಾರಣಾ ಜಲಾಶಯ 98%, ರಾಧಾನಗರಿ ಜಲಾಶಯ 95%, ಕಣೇರ ಜಲಾಶಯ 99%, ಧೂಮ ಜಲಾಶಯ 98%, ಪಾಟಗಾಂವ 100%, ಧೂದಗಂಗಾ 99% ತುಂಬಿದೆ. ಹಿಪ್ಪರಗಿ ಬ್ಯಾರೆಜ್‌ನಿಂದ 15,000 ಹಾಗೂ ಆಲಮಟ್ಟಿ ಜಲಾಶಯದಿಂದ 18,422 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.
ಇನ್ನು ಕೃಷ್ಣಾ ನದಿ ಒಳ ಹರಿವು 21 ಸಾವಿರಕ್ಕೂ ಅಧಿಕ ಕ್ಯೂಸೆಕ್ ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ ಸಂಪಗಾಂವಿ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.