ETV Bharat / state

ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ: ಪ್ರಕರಣ ದಾಖಲು

author img

By

Published : Feb 28, 2023, 1:28 PM IST

ಐನಾಪುರ ಗ್ರಾಮದ ಸ್ಥಳೀಯ ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ- ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು- ಪೊಲೀಸರಿಂದ ತನಿಖೆ

Belagavi
ಬೆಳಗಾವಿ

ಹಲ್ಲೆಗೊಳಗಾದ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಶಾಂತ್

ಚಿಕ್ಕೋಡಿ(ಬೆಳಗಾವಿ): ಚುನಾವಣೆಯ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಗಳು ಮತ್ತು ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿವೆ. ಈ ಮಧ್ಯೆ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಸ್ಥಳೀಯ ಕಾಂಗ್ರೆಸ್ ಮುಖಂಡನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಶಾಂತ್ ಅಜಿತ್ ಅಪರಾಜ್ ಹಲ್ಲೆಗೊಳಗಾದವರು. ಸೋಮವಾರ ಸಂಜೆ ವೇಳೆಗೆ ಐನಾಪುರ ಶೇಡಬಾಳ ರಸ್ತೆಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳು ಕಾಗವಾಡ ಸಮುದಾಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳು ಪ್ರಶಾಂತ್ ಪ್ರತಿಕ್ರಿಯೆ: ಸೋಮವಾರ ಸಂಜೆ ಐನಾಪುರ-ಶೇಡಬಾಳ ರಸ್ತೆ ಮಾರ್ಗವಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದೆ. ಈ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ, ಬಲವಂತವಾಗಿ ಹಿಡಿದು ನನ್ನ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅವರು ಮರಾಠಿ ಭಾಷೆಯಲ್ಲಿ ಮಾತನಾಡುತ್ತಿದ್ದರು, ತಾತ್ಯನ ನೀನು ಬಿಟ್ಟರೆ ನಾವು ಬಿಡುವುದಿಲ್ಲ. ನಿನ್ನನ್ನು ನಾವು ಸುಮ್ನೆ ಬಿಡೋದಿಲ್ಲ ಎಂದರು. ಅಲ್ಲದೇ ನನ್ನ ಬೆನ್ನ ಮೇಲೆ ಪೆನ್ನಿನಿಂದ ತಾತ್ಯಾ ಎಂದು ಬರೆದಿದ್ದಾರೆ ಹಾಗೂ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅವರು ಯಾರು ಎಂಬುದು ನನಗೆ ಗೊತ್ತಿಲ್ಲ. ಈ ಕುರಿತು ನಾನು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ ಎಂದು ಹಲ್ಲೆಗೆ ಒಳಗಾದ ಪ್ರಶಾಂತ್ ಅಪರಾಜ್​​ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೈ ಮುಖಂಡನ ಮೇಲೆ ದಾಳಿ ಯತ್ನ: ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಮೇಲೆ ಹಲ್ಲೆಗೆ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿ ಬಂದಿದ್ದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಬೆಂಗಳೂರಿನ ಜೆ ಜೆ ನಗರ ಠಾಣಾ ವ್ಯಾಪ್ತಿಯಲ್ಲಿರುವ ಅಲ್ತಾಫ್ ಖಾನ್ ಮನೆ ಬಳಿ ಚಾಕು, ಬ್ಲೇಡ್​ಗಳೊಂದಿಗೆ ಆಟೋದಲ್ಲಿ ಬಂದಿದ್ದ ನಾಲ್ವರು, ಹೊಂಚು ಹಾಕಿ ಕುಳಿತಿದ್ದರು. ಬಳಿಕ 'ಅಲ್ತಾಫ್ ಮನೆಯಿಂದ ಹೊರ ಬರ್ಲಿಲ್ಲ, ಬಚಾವ್ ಆದ' ಎಂದು ಮಾತನಾಡಿಕೊಳ್ಳುತ್ತಿದ್ದರು. ಆ ಮಾತು ಕೇಳಿಸಿಕೊಂಡು ಪರಾರಿಯಾಗುತ್ತಿದ್ದ ಆಟೋ ಬೆನ್ನಟ್ಟಿದ ಸ್ಥಳೀಯರು ಮೂವರು ಆರೋಪಿಗಳನ್ನು ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕೈ ಮುಖಂಡನ ಮೇಲೆ ದಾಳಿ ಯತ್ನ: ಮೂವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಬಿಜೆಪಿ ಮುಖಂಡನ ಹತ್ಯೆಗೈದ ನಕ್ಸಲರು: ಛತ್ತೀಸ್​ಗಢದಲ್ಲಿ ಇತ್ತೀಚೆಗೆ ನಕ್ಸಲರು ಅಟ್ಟಹಾಸ ಮೆರೆದಿದ್ದರು. ಬಿಜಾಪುರ ಜಿಲ್ಲೆಯಲ್ಲಿ ಕುಟುಂಬಸ್ಥರ ಮುಂದೆಯೇ ಬಿಜೆಪಿ ಮುಖಂಡರೊಬ್ಬರನ್ನು ನಕ್ಸಲರು ಬರ್ಬರವಾಗಿ ಕೊಲೆ ಮಾಡಿದ್ದರು. ಹತ್ಯೆಯಾದವರನ್ನು ನೀಲಕಂಠ ಕಕ್ಕೆಂ ಎಂದು ಗುರುತಿಸಲಾಗಿತ್ತು. ಇವರು ಇಲ್ಲಿನ ಉಸುರ್​ ಮಂಡಲದ ಬಿಜೆಪಿ ಅಧ್ಯಕ್ಷರಾಗಿದ್ದರು. ಅಲ್ಲದೇ, ಈ ಘಟನೆ ನಂತರ ಕರಪತ್ರ ಎಸೆದಿರುವ ನಕ್ಸಲರು ಹತ್ಯೆಯ ಹೊಣೆಯನ್ನೂ ಹೊತ್ತುಕೊಂಡಿದ್ದರು.

ಇದನ್ನೂ ಓದಿ: ಕುಟುಂಬಸ್ಥರ ಮುಂದೆಯೇ ಬಿಜೆಪಿ ಮುಖಂಡನ ಹತ್ಯೆಗೈದ ನಕ್ಸಲರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.