ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಸಂಪರ್ಕಿಸುವ ಬಾಚಿ ಚೆಕ್ಪೋಸ್ಟ್ಗೆ ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲಿಸಿದರು.
ಕಳ್ಳದಾರಿ ಮೂಲಕ ಮಹಾರಾಷ್ಟ್ರದ ಜನತೆ ಬೆಳಗಾವಿ ಗಡಿ ಪ್ರವೇಶಿಸುತ್ತಿರುವ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು.
ಇದನ್ನೂ ಓದಿ: ಹೆಸರಿಗೆ ಮಾತ್ರ ಚೆಕ್ ಪೋಸ್ಟ್: ಚಿಕ್ಕೋಡಿ ಜನತೆಯಲ್ಲಿ ಆತಂಕ
ಅಕ್ರಮ ಗಡಿ ಪ್ರವೇಶಕ್ಕೆ ಕಡಿವಾಣ ಹಾಕುವಂತೆ ಚೆಕ್ಪೋಸ್ಟ್ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಕಳ್ಳದಾರಿಗಳನ್ನು ಬಂದ್ ಮಾಡುವ ಬಗ್ಗೆಯೂ ಕ್ರಮವಹಿಸುವುದಾಗಿ ಡಿಸಿಪಿ ಯಶೋಧಾ ವಂಟಗೋಡಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.