ಅಥಣಿ : ಮರಾಠ ಸಮುದಾಯಕ್ಕೆ ಬಿಜೆಪಿ ಸರ್ಕಾರ ಅಭಿವೃದ್ಧಿ ನಿಗಮ ಪ್ರಾಧಿಕಾರ ರಚನೆ ಮಾಡಿರೋದಕ್ಕೆ ಕೆಲ ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರಿಗೆ ಇತಿಹಾಸ ಗೊತ್ತಿಲ್ಲದೆ, ವಿನಾಕಾರಣ ಗೊಂದಲ ಉಂಟು ಮಾಡುತ್ತಿದ್ದಾರೆಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಓದಿ: ಫುಟ್ಪಾತ್ನಲ್ಲಿ ತೆರಳುತ್ತಿದ್ದ ಮಹಿಳೆ: ಪ್ರಾಣವನ್ನೇ ತೆಗೆಯಿತು ಯಮಸ್ವರೂಪಿ ಗೂಡ್ಸ್ ಲಾರಿ
ಅಥಣಿ ತಾಲೂಕಿನ ತಂಗಡಿ ಗ್ರಾಮದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಮೂರ್ತಿಯ ಉದ್ಘಾಟನೆ ಸಮಾರಂಭ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲಾ ಸಮುದಾಯದಲ್ಲಿ ಬಡವರು ಇದ್ದಾರೆ. ಅದೇ ರೀತಿಯಲ್ಲೂ ಮರಾಠ ಸಮಾಜದಲ್ಲೂ ಬಡವರಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಸರ್ಕಾರ ಮರಾಠ ಪ್ರಾಧಿಕಾರ ರಚನೆ ಮಾಡಿತು. ಆದರೆ, ಕೆಲ ಕನ್ನಡ ಪರ ಹೋರಾಟಗಾರರು ಸುಮ್ಮನೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅವರಿಗೆ ಸರಿಯಾದ ಇತಿಹಾಸ ಗೊತ್ತಿಲ್ಲದೆ ಈ ರೀತಿ ಪ್ರತಿಭಟನೆ ನಡೆಸಿದ್ದಾರೆ. ಮರಾಠ ಸಮುದಾಯ ಸಾವಿರಾರು ವರ್ಷಗಳ ಇತಿಹಾಸವಿದೆ, ಶಿವಾಜಿ ಮಹಾರಾಜರ ಏಳನೇ ತಲೆಮಾರು ಕುಟುಂಬ ಗದಗ ಜಿಲ್ಲೆಯಲ್ಲಿ ಹುಟ್ಟಿದ್ದು, ಮಾಹಿತಿ ಇಲ್ಲದೆ ವಿನಾಕಾರಣ ವಿರೋಧ ವ್ಯಕ್ತಪಡಿಸಿದ್ದಾರೆ.
ಹೋರಾಟಗಾರರು ಸರಿಯಾಗಿ ಇತಿಹಾಸ ತಿಳಿಯುವಂತೆ ಕಿವಿ ಮಾತು ಹೇಳಿದರು. ಮರಾಠ ಸಮುದಾಯ ಈ ಭೂಮಿಯಲ್ಲಿ ಹುಟ್ಟಿದೆ. ದೇಶಕ್ಕೆ ಈ ಸಮಾಜದ ಕೊಡುಗೆ ಅನನ್ಯ ಎಂದು ಡಿಸಿಎಂ ಸವದಿ ಹೇಳಿದರು.