ETV Bharat / state

ಆರೋಗ್ಯ ಇಲಾಖೆಗೆ ಅಗತ್ಯ ವಾಹನ ನೀಡಿ ಸಹಕರಿಸಿ: ಡಿಸಿಎಂ ಸವದಿ

author img

By

Published : Apr 3, 2020, 4:50 PM IST

ದೇಶದಾದ್ಯಂತ ಲಾಕ್​ಡೌನ್ ಹಿನ್ನೆಲೆ ವಿವಿಧ ಇಲಾಖೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ಬೇರೆ ಇಲಾಖೆಗಳಲ್ಲಿ ಖಾಲಿ ಇರುವ ವಾಹನಗಳನ್ನು ಆರೋಗ್ಯ ಹಾಗೂ ಪೊಲೀಸ್ ಇಲಾಖೆಗೆ ನೀಡಬೇಕೆಂದು ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿಕೊಂಡಿದ್ದಾರೆ.

DCM Lakshman savadi
ಡಿಸಿಎಂ ಸವದಿ

ಬೆಳಗಾವಿ: ದೇಶದಾದ್ಯಂತ ಲಾಕ್​ಡೌನ್ ಹಿನ್ನೆಲೆ ವಿವಿಧ ಇಲಾಖೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ಬೇರೆ ಇಲಾಖೆಗಳಲ್ಲಿ ಖಾಲಿ ಇರುವ ವಾಹನಗಳನ್ನು ಆರೋಗ್ಯ ಹಾಗೂ ಪೊಲೀಸ್ ಇಲಾಖೆಗೆ ನೀಡಬೇಕೆಂದು ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರವ ಅವರು, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಈಗಲೂ ಸಹ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ಹೀಗಾಗಿ ಈ ಇಲಾಖೆಗಳಿಗೆ ಹೆಚ್ಚಿನ ವಾಹನಗಳ ಅಗತ್ಯವಿದ್ದು, ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ವಾಹನಗಳನ್ನು ಕರೊನಾ ನಿಯಂತ್ರಣಕ್ಕೆ ಮುಂದಾಗಿರುವ ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ಸೇವೆಗೆ ತಾತ್ಕಾಲಿಕವಾಗಿ ನೀಡಬೇಕೆಂದು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಅವರು ಮನವಿ ಮಾಡಿಕೊಂಡಿದ್ದಾರೆ.

ಕರೊನಾ ನಿಯಂತ್ರಣ ಸೇವೆಗೆ ಈ ರೀತಿ ವಾಹನಗಳನ್ನು ವಿವಿಧ ಇಲಾಖೆಗಳಿಂದ ಅಧಿಕೃತವಾಗಿ ಪಡೆದು ಆರೋಗ್ಯ ಇಲಾಖೆಗೆ ಒದಗಿಸುವ ಪ್ರಕ್ರಿಯೆಯನ್ನು ನಮ್ಮ ಸಾರಿಗೆ ಇಲಾಖೆಯ ಆರ್​ಟಿಒ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ಆದರೆ, ಕೆಲವು ವಾಹನ ಚಾಲಕರು ಕರೊನಾ ಭಯದಿಂದ ಆರೋಗ್ಯ ಇಲಾಖೆಗೆ ತಮ್ಮ ವಾಹನಗಳೊಂದಿಗೆ ತಾತ್ಕಾಲಿಕ ಸೇವೆ ನೀಡಲು ತೆರಳಲು ನಿರಾಕರಿಸುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಈ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.