ಅಥಣಿ: ಕೊರೊವಾ ವ್ಯಾಕ್ಸಿನ್ ಅವನ್ನು ದೇಶಾದ್ಯಂತ ಹಂಚಿಕೆಗೆ ಇವತ್ತು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಬಹುನಿರೀಕ್ಷಿತ ಸ್ವದೇಶಿ ಕೋವ್ಯಾಕ್ಸಿನ್ ಬಂದಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.
ಅಥಣಿ ಪಟ್ಟಣದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಇನ್ಮೇಲೆ ಕೊರೊನಾ ಮಹಾಮಾರಿಗೆ ಹೆದರುವ ಅವಶ್ಯಕತೆ ಇಲ್ಲ. ದೇಶದ ಪ್ರಧಾನಿಯವರ ಸತತ ಪ್ರಯತ್ನದಿಂದ ಇದಕ್ಕೆ ಲಸಿಕೆ ಬಂದಿದೆ. ಲಸಿಕೆ ಸಿದ್ಧಪಡಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಹಾಮಾರಿ ತಡೆಯಲು ಮೋದಿಯವರ ಆಸಕ್ತಿಯಿಂದಲೇ ಇಷ್ಟು ಬೇಗನೆ ಕೋ ವ್ಯಾಕ್ಸಿನ್ ಬಂದಿದೆ. ಅದರಲ್ಲೂ ಭಾರತದ ಲಸಿಕೆ ವಿಶ್ವದಲ್ಲಿ ಕ್ರಾಂತಿ ಮಾಡಲಿದೆ ಎಂದು ಹೇಳಿದರು.
ಇದನ್ನೂ ಓದಿ:ಭಾರತದಲ್ಲಿ 1.52 ಲಕ್ಷ ಮಂದಿ ಬಲಿ ಪಡೆದ ಕೊರೊನಾ ನಿಯಂತ್ರಣಕ್ಕೆ ಬಂದೇ ಬಿಡ್ತು ಲಸಿಕೆ