ಅಥಣಿ: ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರೆ ಉತ್ತರ ಪ್ರದೇಶ ತಂದ ಕಾನೂನನ್ನು ಕರ್ನಾಟಕದಲ್ಲೂ ಜಾರಿ ಮಾಡಲಾಗುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪಾದರಾಯನಪುರ ಗಲಾಟೆ ಸಂಬಂಧ ಈಗಾಗಲೇ ಕಾನೂನು ಅಸ್ತ್ರ ಸಿದ್ಧವಾಗಿದೆ. ನಾನು, ಆರ್. ಅಶೋಕ ಮತ್ತು ಬೊಮ್ಮಾಯಿ ಅವರು ಘಟನೆಯ ಮಾಹಿತಿ ಅವತ್ತೇ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಪುಂಡಾಟಿಕೆ ಮುಂದುವರೆದರೆ ಅದು ಯಾರೇ ಇದ್ದರೂ ಕಾನೂನು ಮಾತನಾಡಲಿದೆ ಎಂದಿದ್ದಾರೆ.
ಸುಗ್ರೀವಾಜ್ಞೆಯಿಂದ ಕರ್ತವ್ಯನಿರತ ಸಿಬ್ಬಂದಿ ಮೇಲಿನ ಹಲ್ಲೆಗೆ ಕಡಿವಾಣ ಹಾಕಬಹುದಾಗಿದೆ. ಈಗಾಗಲೇ ಕೇರಳ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಕಠಿಣ ಕಾನೂನುಗಳ ಕ್ರಮದ ಕುರಿತು ಚರ್ಚೆ ನಡೆಸಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಅಂಕಿತ ಪಡೆದುಕೊಂಡಿದ್ದು, ರಾಜ್ಯದಲ್ಲಿಯೂ ಸುಗ್ರೀವಾಜ್ಞೆ ಜಾರಿಯಲ್ಲಿದೆ ಎಂದು ತಿಳಿಸಿದರು.