ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಚುನಾವಣೆ ಬಿಜೆಪಿ ಟಿಕೆಟ್ ಗಾಗಿ ಕತ್ತಿ ಸಹೋದರರು ಹರಸಾಹಸ ಪಡುತ್ತಿದ್ದರು. ಆದರೆ ಕೊನೆಯಲ್ಲಿ ಟಿಕೆಟ್ ಕೈ ತಪ್ಪಿದೆ. ರಮೇಶ್ ಕತ್ತಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲು ಡಿಸಿಸಿ ಬ್ಯಾಂಕ್ ಚುನಾವಣೆ ಸೋಲು ಕಾರಣವಿರಬಹುದಾ ಎಂಬ ಪ್ರಶ್ನೆ ಹುಟ್ಟಿದೆಯಂತೆ.
ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಸೇರಿ ಹಲವರ ಷಡ್ಯಂತ್ರದಿಂದ ರಮೇಶ್ ಕತ್ತಿಗೆ ಟಿಕೆಟ್ ದೊರಕಲಿಲ್ಲ ಅಂತ ಹೇಳಲಾಗುತ್ತಿದೆ. ಲಕ್ಷ್ಮಣ ಸವದಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸೋಲಲು ಕತ್ತಿ ಸಹೋದರರು ಹಾಗೂ ಜಾರಕಿಹೊಳಿ ಸಹೋದರರು ಕಾರಣವಂತೆ.
ಈಗ ವಿರೋಧಿಗಳ ಪ್ಲ್ಯಾನ್ ಫ್ಲಾಪ್ ಮಾಡಲು ಕತ್ತಿ ಸಹೋದರರು ಹೊಸ ತಂತ್ರ ಹೆಣೆಯುತ್ತದ್ದಾರಂತೆ. ಒಟ್ಟಿನಲ್ಲಿ ಈ ಬಾರಿ ಮಹಾಸಮರದಲ್ಲಿ ಚಿಕ್ಕೋಡಿ ಒಂದಲ್ಲ ಇನ್ನೊಂದು ರೀತಿ ಕುತೂಹಲ ಕೆರಳಿಸುತ್ತಿದೆ.