ETV Bharat / state

ಅತೃಪ್ತ ಶಾಸಕರ ರಾಜೀನಾಮೆ ಪಟ್ಟಿಯಲ್ಲಿ ಸೇರ್ತಾರಾ ಶ್ರೀಮಂತ ಪಾಟೀಲ್​ - ಗಣೇಶ ಹುಕ್ಕೇರಿ?

author img

By

Published : Jul 8, 2019, 10:49 AM IST

ಅತೃಪ್ತ ಶಾಸಕರ ರಾಜೀನಾಮೆ ಪಟ್ಟಿಗೆ ಇನ್ನಷ್ಟು ಶಾಸಕರು ಸೇರುವ ಸಾಧ್ಯತೆಯಿದೆ. ಈ ಪಟ್ಟಿಗೆ ಸದಲಗಾ ಶಾಸಕ ಗಣೇಶ್​ ಹುಕ್ಕೇರಿ ಹಾಗೂ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್​ ಇಂದು ಸೇರಲಿದ್ದಾರೆ ಎನ್ನುತ್ತಿರುವುದು ಕುತೂಹಲ ಮೂಡಿಸಿದೆ.

ಶ್ರೀಮಂತ ಪಾಟೀಲ - ಗಣೇಶ ಹುಕ್ಕೇರಿ

ಚಿಕ್ಕೋಡಿ‌: ಸದಲಗಾ ಶಾಸಕ ಗಣೇಶ್​ ಹುಕ್ಕೇರಿ ಹಾಗೂ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್​ ಅವರ ಹೆಸರು ಇಂದು ರಾಜೀನಾಮೆ ನೀಡುವ ಸಂಭಾವ್ಯ ಶಾಸಕರ ಪಟ್ಟಿಯಲ್ಲಿವೆ ಎನ್ನಲಾಗ್ತಿದೆ. ಈ ಇಬ್ಬರು ಶಾಸಕರು ಮೊಬೈಲ್ ಸಂಪರ್ಕಕ್ಕೂ ಸಿಗದಿರುವುದು ಇವರ ರಾಜೀನಾಮೆ ವದಂತಿಗೆ ಮತ್ತಷ್ಟು ಪುಷ್ಠಿ ನೀಡುವಂತಿದೆ.

ಕಳೆದ ಎರಡು ದಿನಗಳ ಬೆಳವಣಿಗಳ ಮಧ್ಯೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಶಾಸಕ ಗಣೇಶ್​ ಹುಕ್ಕೇರಿ ಅಪ್ಪನಿಗಾಗಿ ಪದತ್ಯಾಗ ಮಾಡ್ತಾರಾ ? ಎಂಬ ಪ್ರಶ್ನೆಗಳು ಕ್ಷೇತ್ರದ ತುಂಬಾ ಕೇಳಿ ಬರುತ್ತಿವೆ. ಜೊತೆಗೆ, ಲೋಕಸಮರದಲ್ಲಿ ಹೀನಾಯ ಸೋಲಿನಿಂದ ಹೊರ ಬಂದು ಉಪ ಚುಣಾವಣೆ ಎದುರಿಸ್ತಾರಾ ಪ್ರಕಾಶ್ ಹುಕ್ಕೇರಿ? ಎಂದು ಮಾತುಗಳು ಕೇಳಿ ಬರುತ್ತಿವೆ.

ಇನ್ನು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜಕೀಯದಾಟದಲ್ಲಿ ಸೋತು ಸುಣ್ಣವಾಗಿರುವ ಪ್ರಕಾಶ್​ ಹುಕ್ಕೇರಿ ಅವರು ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ. ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿಗೆ ರಮೇಶ್​ ಜಾರಕಿಹೊಳಿ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಪ್ರಕಾಶ್​ ಹುಕ್ಕೇರಿ ಸೋತಿದ್ದರು.

ಪುತ್ರ ಗಣೇಶ್​ ರಾಜೀನಾಮೆ‌ ಕೊಡಿಸಿ ಮತ್ತೆ ರಾಜ್ಯ ರಾಜಕೀಯಕ್ಕೆ ಪ್ರಕಾಶ್​ ಹುಕ್ಕೇರಿ ಧುಮಕುತ್ತಾರಾ ಎಂದು ಅನ್ನೋ ಪ್ರಶ್ನೆ ಸಹ ರಾಜಕೀಯ ವಲಯದಲ್ಲಿ ಎದ್ದಿದೆ.

ಇನ್ನು, ಇಲ್ಲಿಯವರೆಗೂ ಪಕ್ಷ ತೊರೆಯುವುದನ್ನು ನಿರಾಕರಿಸುತ್ತಲೇ ಬಂದಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್​ ಇವರ ಮೊಬೈಲ್ ಕೂಡಾ ಸಂಪರ್ಕಕಕ್ಕೆ ಸಿಗುತ್ತಿಲ್ಲ. ಆದರೆ, ಇಂದಿನ ದಿಢೀರ್ ಬೆಳವಣಿಗೆಯಲ್ಲಿ ಅಚ್ಚರಿಹುಟ್ಟಿಸುವ ಸಾಧ್ಯತೆ ಇದೆಯಾ ಎಂದು ಕಾದು ನೋಡಬೇಕಿದೆ.

ಈಗಾಗಲೇ ಈ ಇಬ್ಬರು ಶಾಸಕರು ಬೆಂಗಳೂರಿಗೆ ತೆರಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದ್ದು, ಇಂದು ರಾಜೀನಾಮೆ ನೀಡುತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

Intro:ಇಂದು ರಾಜೀನಾಮೆ ನೀಡುವ ಸಂಭಾವ್ಯ ಶಾಸಕರ ಪಟ್ಟಿಯಲ್ಲಿ ಶ್ರೀಮಂತ ಪಾಟೀಲ - ಗಣೇಶ ಹುಕ್ಕೇರಿ ರಾಜೀನಾಮೆ ನೀಡುತ್ತಾರಾ?Body:

ಚಿಕ್ಕೋಡಿ :

ಚಿಕ್ಕೋಡಿ‌- ಸದಲಗಾ ಶಾಸಕ ಶಾಸಕ ಗಣೇಶ ಹುಕ್ಕೇರಿ ಹಾಗೂ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಇಂದು ರಾಜೀನಾಮೆ ನೀಡುವ ಸಂಭಾವ್ಯ ಶಾಸಕರ ಪಟ್ಟಿಯಲ್ಲಿ ಹೆಸರು ಕೇಳಿ ಬರುತ್ತಿದ್ದು. ಈ ಇಬ್ಬರು ಶಾಸಕರ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ.

ಕಳೆದ ಏರಡು ದಿನಗಳ ಬೆಳವಣಿಗಳ ಮದ್ಯ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ ಶಾಸಕ ಗಣೇಶ ಹುಕ್ಕೇರಿ ಅಪ್ಪನಿಗಾಗಿ ಪದತ್ಯಾಗ ಮಾಡ್ತಾರಾ ? ಎಂಬ ಪ್ರಶ್ನೆಗಳು ಕ್ಷೇತ್ರದ ತುಂಬಾ ಕೇಳಿ ಬರುತ್ತಿದೆ.

ಲೋಕಸಮರದಲ್ಲಿ ಹೀನಾಯ ಸೋಲಿನಿಂದ ಹೊರ ಬಂದು ಉಪ ಚುಣಾವಣೆ ಎದುರಿಸ್ತಾರಾ ಪ್ರಕಾಶ ಹುಕ್ಕೇರಿ? ಎಂದು ಮಾತುಗಳು ಕೇಳಿ ಬರುತ್ತಿವೆ.

ರಮೇಶ್ ಜಾರಕಿಹೊಳಿ ರಾಜೀಯದಾಟದಲ್ಲಿ ಸೋತು ಸುಣ್ಣವಾಗಿರುವ ಪ್ರಕಾಶ ಹುಕ್ಕೇರಿ ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೇಸ್ ನಾಯಕ. ಲೋಕ ಸಭಾ ಚುನಾವಣೆಯಲ್ಲಿ ಹಿನ್ನಾಯ ಸೋಲಿಗೆ ರಮೇಶ ಜಾರಕಿಹೊಳಿ ಕಾರಣರು ಏಕೆಂದರೆ 2019 ರ ಲೋಕಸಭೆಯಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದ್ದ ರಮೇಶ್ ಜಾರಕಿಹೊಳಿ ಇದರಿಂದ ಬಹಳ ಅಂತರದಿಂದ ಪ್ರಕಾಶ ಹುಕ್ಕೇರಿ ಸೋಲಲು ಕಾರಣರಾಗಿದ್ದಾರೆ.

ಮಗ ಗಣೇಶ ಜಾರಕಿಹೊಳಿ ರಾಜೀನಾಮೆ‌ ಕೊಡಿಸಿ ಮತ್ತೆ ರಾಜ್ಯ ರಾಜಕೀಯಕ್ಕೆ ಪ್ರಕಾಶ ಹುಕ್ಕೇರಿ ಧುಮಕುತ್ತಾರಾ ಎಂದು ಕಾಯ್ದು ನೋಡಬೇಕಿದೆ?

ಇಲ್ಲಿಯವರೆಗೂ ಪಕ್ಷ ತೊರೆಯುವದನ್ನು ನಿರಾಕತಿಸುತ್ತಲೆ ಬಂದಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರ ಮೊಬೈಲ್ ಕೂಡಾ ಸಂಪರ್ಕದಲ್ಲಿ ಸಿಗುತ್ತಿಲ್ಲ. ಆದರೆ, ಇಂದಿನ ದಿಢೀರ್ ಬೆಳವಣಿಗೆಯಲ್ಲಿ ಅಚ್ಚರಿಹುಟ್ಟಿಸುವ ಸಾಧ್ಯತೆ ಇದೆಯಾ ಎಂದು ಕಾಯ್ದು ನೋಡಬೇಕಿದೆ.

ಈಗಾಗಲೇ ಈ ಇಬ್ಬರು ಶಾಸಕರು ಬೆಂಗಳೂರಿಗೆ ತೆರಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈಗಾಗಲೇ ಬೆಳಗಾವಿಯ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು ಬೆಂಗಳೂರಿಗೆ ತೆರಳಿದ ಈ ಇಬ್ಬರು ಶಾಸಕರು ಇಂದು ರಾಜೀನಾಮೆ ನೀಡುತ್ತಾರಾ ಎಂದು ಕಾಯ್ದು ನೋಡಬೇಕಿದೆ.

ಪೋಟೋ 1 : ಚಿಕ್ಕೋಡಿ - ಸದಲಗಾ ಶಾಸಕ ಗಣೇಶ ಹುಕ್ಕೇರಿ

ಪೋಟೋ 2 : ಕಾಗವಾಡ ಶಾಸಕ ಶ್ರೀಮಂತ ಪಾಟೀಲ

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.