ಬೆಳಗಾವಿ: ಡಿವೈಡರ್ಗೆ ಡಿಕ್ಕಿ ಹೊಡೆದು ಪ್ಯಾಸೆಂಜರ್ ಕ್ರೂಸರ್ ಆರಡಿ ಮೇಲಿಂದ ಬಿದ್ದ ಘಟನೆ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಳೆಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಪ್ಯಾಸೆಂಜರ್ ಕ್ರೂಸರ್ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
ಹೆದ್ದಾರಿ ಮೇಲಿಂದ ಕ್ರೂಸರ್ ಪಕ್ಕದ ಗದ್ದೆಗೆ ಬಿದ್ದಿದೆ. ಕ್ರೂಸರ್ನಲ್ಲಿದ್ದ 6 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಕಿತ್ತೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುತೇಕ ಎಲ್ಲರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: 'ಟೀಂ ಇಂಡಿಯಾ ರಬ್ಬರ್ ಚೆಂಡು ಇದ್ದಂತೆ, ಪುಟಿಯುತ್ತದೆ, ಪುಟಿಯುತ್ತಲೇ ಇರುತ್ತದೆ'
ಧಾರವಾಡ ಜಿಲ್ಲೆಯ ಸೋಮಾಪುರದಿಂದ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮಕ್ಕೆ ಜನರು ಕ್ರೂಸರ್ನಲ್ಲಿ ಬರುತ್ತಿದ್ದರು. ಆ ವೇಳೆ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.