ETV Bharat / state

Belagavi crime: ಹಿಂಡಲಗಾ ಜೈಲಿನಲ್ಲಿ ಕೈದಿಗಳಿಬ್ಬರ ಮಧ್ಯೆ ಮಾರಾಮಾರಿ.. - ಬೆಳಗಾವಿಯ ಹಿಂಡಲಗಾ

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇಬ್ಬರು ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದೀಗ ಗಾಯಗೊಂಡಿರುವ ಕೈದಿಗಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಹಿಂಡಲಗಾ ಜೈಲು
ಹಿಂಡಲಗಾ ಜೈಲು
author img

By

Published : Jul 30, 2023, 6:05 PM IST

Updated : Jul 30, 2023, 6:27 PM IST

ಹಿಂಡಲಗಾ ಜೈಲಿನಲ್ಲಿ ಕೈದಿಗಳಿಬ್ಬರ ಮಧ್ಯೆ ಮಾರಾಮಾರಿ..

ಬೆಳಗಾವಿ: ಇಲ್ಲಿನ ಹಿಂಡಲಗಾ ಜೈಲಿನ ಕೈದಿಗಳಿಬ್ಬರು ಪರಸ್ಪರ ಹೊಡೆದಾಕೊಂಡಿರುವ ಘಟನೆ ನಡೆದಿದ್ದು, ಗಾಯಗೊಂಡಿರುವ ಕೈದಿಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗಲಾಟೆಯಲ್ಲಿ ಓರ್ವ ಕೈದಿ ಸ್ಕ್ರೂಡ್ರೈವರ್​ನಿಂದ ಮತ್ತೊಬ್ಬ ಕೈದಿಗೆ ಐದು ಬಾರಿ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಶಂಕರ ಭಜಂತ್ರಿ ಕೊಲೆ ಮಾಡಲು ಯತ್ನಿಸಿದ ಕೈದಿ. ಮಂಡ್ಯ ಮೂಲದ ಸಾಯಿಕುಮಾರ್​ ಗಾಯಗೊಂಡಿರುವ ವಿಚಾರಣಾಧೀನ ಕೈದಿ ಎಂದು ತಿಳಿದುಬಂದಿದೆ.

ಸಾಯಿಕುಮಾರ್​ಗೆ ಎದೆ, ಹೊಟ್ಟೆ, ಕಿವಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲಾಸ್ಪತ್ರೆ ಮುಂದೆ ಬಿಗಿ ಪೊಲೀಸ್​​ ಭದ್ರತೆ ನಿಯೋಜಿಸಲಾಗಿದೆ.

ಸಾಯಿಕುಮಾರ್
ಸಾಯಿಕುಮಾರ್

ಕಾರಾಗೃಹದಲ್ಲಿ ಕೈದಿಗಳ ನಡುವೆ ಗಲಾಟೆ: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಹಳೆ ವೈಷಮ್ಯದ ಹಿನ್ನೆಲೆ ಕೈದಿಗಳ ನಡುವೆ (ಜುಲೈ 29-2021) ಮಾರಾಮಾರಿ ನಡೆದಿತ್ತು. ಈ ವೇಳೆ ಓರ್ವ ಗಾಯಗೊಂಡಿದ್ದರು. ಸಲ್ಮಾನ್(24) ಗಾಯಗೊಂಡವರು ಎಂಬುದು ತಿಳಿದುಬಂದಿತ್ತು. ಈತ ಅಂದು ಗಾಂಜಾ ಮಾರಾಟ ಕೇಸ್​ನಲ್ಲಿ ಕಾರಾಗೃಹಕ್ಕೆ ಬಂದಿದ್ದ. ಈತನ ವಿರುದ್ದ ಹಳೆ ವೈಷಮ್ಯ ಕಾರಣ ಈಗಾಗಲೇ ಅರೆಸ್ಟ್‌ ಆಗಿದ್ದ ಸುಕ್ಕ ಕಲೀಂ ಹಾಗೂ ಗೌಸ್ ಎಂಬುವರು ಸಲ್ಮಾನ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದರು. ಇದರಿಂದ ಸಲ್ಮಾನ್ ಮೂಗಿಗೆ ಗಾಯವಾಗಿತ್ತು. ತಕ್ಷಣ ಕಾರಾಗೃಹದ ಸಿಬ್ಬಂದಿ ಗಲಾಟೆ ಬಿಡಿಸಿದ್ದರು.

ಈ ವೇಳೆಗಾಗಲೇ ಹಲ್ಲೆ ನಡೆಸಿದವರು ಸಲ್ಮಾನ್ ಕುಟುಂಬದವರಿಗೆ ಕರೆ ಮಾಡಿ ಆತನನ್ನು ಕೊಲೆ ಮಾಡುವುದಾಗಿ ತಿಳಿಸಿದ್ದರು. ಇದನ್ನು ತಿಳಿದ ಆತನ ಕುಟುಂಬಸ್ಥರು ತುಂಗಾನಗರ ಪೊಲೀಸ್ ಠಾಣೆಗೆ ದೂರು‌ ನೀಡಲು ಹೋಗಿದ್ದರು. ಕೆಲವರು ಕಾರಾಗೃಹದ ಮುಂದೆ ಹೋಗಿ ಗಲಾಟೆ ನಡೆಸಲು ಮುಂದಾಗಿದ್ದರು. ಅಷ್ಟರಲ್ಲಿ ತುಂಗಾನಗರ ಸಿಪಿಐ ದೀಪಕ್ ಕಾರಾಗೃಹದ ಬಳಿ ಗಲಾಟೆ ಮಾಡುವವರನ್ನು ವಶಕ್ಕೆ ಪಡೆದುಕೊಂಡಿದ್ದರು.

ಅಧಿಕಾರಿ ಮತ್ತು ಕೈದಿಗಳ ನಡುವೆ ಗಲಾಟೆ: ಇನ್ನೊಂದೆಡೆ ತಿಹಾರ್ ಜೈಲಿನಲ್ಲಿ ಅಧಿಕಾರಿಗಳು ಮತ್ತು ಕೆಲವು ಕೈದಿಗಳ ನಡುವೆ ಗಲಾಟೆ (ಫೆಬ್ರವರಿ 26-2022) ನಡೆದಿತ್ತು. ಈ ಗಲಾಟೆಯಲ್ಲಿ ನಾಲ್ಕು ಕೈದಿಗಳು, ಸಹಾಯಕ ಸೂಪರಿಂಟೆಂಡೆಂಟ್ ಮತ್ತು ತಿಹಾರ್ ಜೈಲಿನ ವಾರ್ಡನ್ ಸೇರಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಡಿಜಿ ಸಂದೀಪ್ ಗೋಯಲ್ ತಿಳಿಸಿದ್ದರು.

ಜೈಲಿನ ಅಧಿಕಾರಿಗಳು ಮತ್ತು ವಿಚಾರಣಾಧೀನ ಕೈದಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಸಹಾಯಕ ಸೂಪರಿಂಟೆಂಡೆಂಟ್ ಸುನಿಲ್ ಮತ್ತು ವಾರ್ಡನ್ ನೀರಜ್ ಶೋಕೀನ್ ಕೈದಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು.

ಈ ವೇಳೆ ಮಾರಾಮಾರಿ ಸಂಭವಿಸಿದ್ದು, ನಾಲ್ವರು ಕೈದಿಗಳು ಗಾಯಗೊಂಡಿದ್ದಾರೆ ಎಂದು ಗೋಯಲ್ ತಿಳಿಸಿದ್ದರು. ಗಾಯಗೊಂಡ ಜೈಲು ಅಧಿಕಾರಿಗಳನ್ನು ಮತ್ತು ಕೈದಿಗಳನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸಂದೀಪ್ ಗೋಯಲ್ ಹೇಳಿದ್ದರು.

ಇದನ್ನೂ ಓದಿ: ತಿಹಾರ್​ ಜೈಲ್ ​: ಅಧಿಕಾರಿ ಮತ್ತು ಕೈದಿಗಳ ನಡುವೆ ಗಲಾಟೆ

Last Updated : Jul 30, 2023, 6:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.