ETV Bharat / state

ಮದ್ಯ ಸೇವನೆಗೆ ಹಣ ನೀಡುವಂತೆ ಪೀಡಿಸುತ್ತಿದ್ದ ಯುವಕನ ಹೊಡೆದು ಕೊಂದ ತಂದೆ, ಸಹೋದರ! - ಕುಡಿತದ ಚಟಕ್ಕೆ ದಾಸನಾಗಿದ್ದ ಯುವಕ ಕೊಲೆ

ಕುಡಿಯಲು ಹಣ ನೀಡುವಂತೆ ಮನೆಯವರಿಗೆ ಉಪಟಳ ನೀಡುತ್ತಿದ್ದ ಯುವಕನನ್ನು ತಂದೆ ಮತ್ತು ಅಣ್ಣನೇ ಹೊಡೆದು ಸಾಯಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

murder
ಸ್ವಂತ ತಂದೆ ಮತ್ತು ಅಣ್ಣನಿಂದ ಹತ್ಯೆಯಾದ ಯುವಕ
author img

By

Published : Jul 12, 2023, 8:52 AM IST

ಚಿಕ್ಕೋಡಿ: ಕುಡಿತದ ಚಟಕ್ಕೆ ದಾಸನಾಗಿ ಕುಟುಂಬಸ್ಥರನ್ನು ಪೀಡಿಸುತ್ತಿದ್ದ ಯುವಕನನ್ನು ಸ್ವಂತ ತಂದೆ ಮತ್ತು ಅಣ್ಣನೇ ಹೊಡೆದು ಸಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸೋಮಯ್ಯ ಮಹಾಲಿಂಗಯ್ಯ ಹಿರೇಮಠ (24) ಮೃತ ದುರ್ದೈವಿ. ಆರೋಪಿಗಳಾದ ಮಹಾಲಿಂಗಯ್ಯ ಗುರುಸಿದ್ದಯ್ಯ ಹಿರೇಮಠ, ಬಸಯ್ಯ ಹಿರೇಮಠ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾರುಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ : ಜುಲೈ 10ರಂದು ಸೋಮಯ್ಯ ಮದ್ಯಪಾನ ಮಾಡಲು ಹಣ ನೀಡುವಂತೆ ಕುಟುಂಬಸ್ಥರಿಗೆ ಬೇಡಿಕೆ ಇಟ್ಟಿದ್ದಾನೆ. ಪ್ರತಿನಿತ್ಯ ಕುಡಿದು ಬಂದು ರಾತ್ರಿಯಿಡೀ ಮನೆಯಲ್ಲಿ ಜಗಳ ಮಾಡುತ್ತಿದ್ದ ಈತನ ವರ್ತನೆಯಿಂದ ಮನೆಯವರು ರೋಸಿ ಹೋಗಿದ್ದರಂತೆ. ಕಳೆದ ಸೋಮವಾರ ಕಲಹ ತೀವ್ರ ಸ್ವರೂಪಕ್ಕೆ ತಿರುಗಿದೆ. ಉಪಟಳ ತಾಳಲಾರದೆ ಮದ್ಯಪಾನ ವ್ಯಸನಿಯ ತಲೆಗೆ ತಂದೆ ಮಹಾಲಿಂಗಯ್ಯ ಗುರುಸಿದ್ದಯ್ಯ ಹಿರೇಮಠ ಹೊಡೆದಿದ್ದಾರೆ. ಸೋಮಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಯುವಕನ ಅಂತ್ಯಕ್ರಿಯೆ ಮಾಡಲಾಗಿದೆ. ಬಳಿಕ, ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮೃತ ಯುವಕನ ತಂದೆ ಹಾಗೂ ಸಹೋದರರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆಗಾಗಿ ಚಿತಾಗಾರದಿಂದ ಅಸ್ಥಿಪಂಜರದ ಕೆಲವು ಭಾಗಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಬೆಳಗಾವಿ ಎಸ್​ಪಿ ಸಂಜೀವ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಪತ್ನಿಯ ಮೇಲೆ ಸಂಶಯ : ಬ್ಲೇಡ್‌ನಿಂದ 26 ದಿನಗಳ ಮಗುವಿನ ಕುತ್ತಿಗೆ ಕೊಯ್ದ ಪಾಪಿ ಅಪ್ಪ!

ಮಹಿಳೆಯ ಬರ್ಬರ ಹತ್ಯೆ : ಕಲಬುರಗಿ ನಗರದ ರೇವಣಸಿದ್ದೇಶ್ವರ್ ಕಾಲೋನಿಯ ಕೆ.ಕೆ. ನಗರದಲ್ಲಿ ಮಂಗಳವಾರ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮನೆಗೆ ನುಗ್ಗಿದ ಸಂಬಂಧಿಕರು ಹರಿತವಾದ ಆಯುಧದಿಂದ ಮಹಿಳೆಗೆ ಇರಿದು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಜೊತೆಗಿದ್ದ ನಾಲ್ವರು ಮಕ್ಕಳನ್ನು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದ್ದಾರೆ. ವಿಜಯಲಕ್ಷ್ಮೀ ಮಠ ಮೃತರು. ಈಕೆಯನ್ನು ರಕ್ಷಿಸಲು ಹೋದ ಮಹಾದೇವ, ರೇಣುಕಾ, ಪಲ್ಲವಿ, ನಾಗರಾಜ ಗಾಯಗೊಂಡಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕಲಬುರಗಿಯಲ್ಲಿ ಸಂಬಂಧಿಕರಿಂದಲೇ ಮಹಿಳೆ ಬರ್ಬರ ಹತ್ಯೆ : ರಕ್ಷಣೆಗೆ ಧಾವಿಸಿದ ನಾಲ್ವರು ಮಕ್ಕಳಿಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.