ETV Bharat / state

ಪ್ರವಾಹ ಬಂದರೂ ಪರ್ವಾಗಿಲ್ಲ, ಜಾಗ ಖಾಲಿ ಮಾಡಲ್ಲ: ಶಾಸಕ, ಜಿಲ್ಲಾಡಳಿತದ ವಿರುದ್ಧ ಸಂತ್ರಸ್ತರ ಆಕ್ರೋಶ

ಖಾ‌ನಾಪುರ ತಾಲೂಕಿನ ಕಣಕುಂಬಿಯಲ್ಲಿ ಹುಟ್ಟುವ ಮಲಪ್ರಭಾ ನದಿಯ ಅಣೆಕಟ್ಟಿನಿಂದ 26,864 ಕ್ಯೂಸೆಕ್​​ ನೀರು ಬಿಡಲಾಗಿದೆ. 28,000 ಕ್ಯೂಸೆಕ್​​ ನೀರು ಒಳಹರಿವು ಇರುವುದರಿಂದ ರಾಮದುರ್ಗ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ನದಿ ಪಾತ್ರದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ರಾಮದುರ್ಗದಲ್ಲಿ ಪ್ರವಾಹ ಭೀತಿ
ರಾಮದುರ್ಗದಲ್ಲಿ ಪ್ರವಾಹ ಭೀತಿ
author img

By

Published : Aug 17, 2020, 5:43 PM IST

Updated : Aug 18, 2020, 12:00 AM IST

ರಾಮದುರ್ಗ (ಬೆಳಗಾವಿ): ಮಲಪ್ರಭಾ ನದಿ ನೀರಿನ ಒಳಹರಿವು ಹೆಚ್ಚಾದ ಪರಿಣಾಮ ಸವದತ್ತಿ ‌ತಾಲೂಕಿನ ನವಿಲು‌ ತೀರ್ಥ ಜಲಾಶಯದಿಂದ 26 ಸಾವಿರಕ್ಕೂ ಹೆಚ್ಚು ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ರಾಮದುರ್ಗ ತಾಲೂಕಿನ ಕಿಲಮ್ಮನೂರ ಗ್ರಾಮದಲ್ಲಿ ಅನೇಕ ಮನೆಗಳು ಜಲಾವೃತವಾಗಿದ್ದು, ನಿವಾಸಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ‌ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಖಾ‌ನಾಪುರ ತಾಲೂಕಿನ ಕಣಕುಂಬಿಯಲ್ಲಿ ಹುಟ್ಟುವ ಮಲಪ್ರಭಾ ನದಿಯ ಅಣೆಕಟ್ಟಿನಿಂದ 26,864 ಕ್ಯೂಸೆಕ್​​ ನೀರು ಬಿಡಲಾಗಿದೆ. 28,000 ಕ್ಯೂಸೆಕ್​​ ನೀರು ಒಳಹರಿವು ಇರುವುದರಿಂದ ರಾಮದುರ್ಗ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ನದಿ ಪಾತ್ರದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ರಾಮದುರ್ಗದಲ್ಲಿ ಪ್ರವಾಹ ಭೀತಿ

ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿಗಳು, ಕಳೆದ ವರ್ಷ ಕೂಡ ಅತಿಯಾದ ಮಳೆಗೆ ಅತಿವೃಷ್ಟಿಯಾಗಿ ಸಾಕಷ್ಟು ಮನೆಗಳು ಬಿದ್ದು ಸಂಕಷ್ಟಕ್ಕೆ ಒಳಗಾಗಿದ್ದೇವೆ. ಈ ವೇಳೆ ನಿಜವಾದ ನೆರೆ ಸಂತ್ರಸ್ತರಿಗೆ ಸಂಬಂಧಿಸಿದ ಅಧಿಕಾರಿಗಳು ಪರಿಹಾರ ನೀಡಿಲ್ಲ. ತಮಗೆ ಬೇಕಾದ ಆಪ್ತರಿಗೆ ಪರಿಹಾರ ನೀಡಿದ್ದಾರೆ. ಕಳೆದ ವರ್ಷದ ಪರಿಹಾರದ ಹಣವೂ ನೀಡುತ್ತಿಲ್ಲ. ಇದೀಗ ಮತ್ತೆ ಮನೆಗಳಿಗೆ ನೀರು ನುಗ್ಗಿ ಮನೆಗಳು ಹಾನಿಯಾಗಿವೆ‌. ಸಣ್ಣ ಮಕ್ಕಳು, ದನಕರುಗಳನ್ನು ಕರೆದುಕೊಂಡು ಎಲ್ಲಿ ಹೋಗೋಣ. ಈ ಕುರಿತು ಸ್ಥಳೀಯ ಶಾಸಕರಿಗೆ ಮನವಿ ಮಾಡಿಕೊಂಡ್ರೆ ನಮಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಿಲ್ಲ. ಬದಲಾಗಿ ನಾವೇ ಸ್ಥಳವನ್ನು ನಿಗದಿಪಡಿಸುವಂತೆ ಶಾಸಕ ಮಹಾದೇವಪ್ಪ ಯಾದವಾಡ ಹೇಳುತ್ತಿದ್ದಾರೆ. ನಾವು ಸ್ಥಳ ನಿಗದಿ ಮಾಡುವುದಾದ್ರೆ ಅವರೇಕೆ ಶಾಸಕರಾಗಿ ಉಳಿಯಬೇಕು ಎಂದು ಪ್ರಶ್ನಸಿದ್ದಾರೆ.

ಅಷ್ಟೇ ಅಲ್ಲದೆ ಉಳಿದುಕೊಳ್ಳಲು ವ್ಯವಸ್ಥೆ ಮಾಡದೇ ಪರಿಹಾರ ನೀಡುವ ಭರವಸೆಯನ್ನು ಮಾತ್ರ ನೀಡುತ್ತಿರವ ಶಾಸಕರು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಅಲ್ಲಿಯವರೆಗೆ ನಾವು ಯಾವುದೇ ಕಾರಣಕ್ಕೂ ಮನೆಗಳನ್ನು ಬಿಡುವುದಿಲ್ಲ. ಸತ್ತರೂ ಈ ಪ್ರವಾಹದಲ್ಲಿಯೇ ಹೋಗುತ್ತೇವೆ ಎಂದು ನೋವಿನಿಂದಲೇ ಶಾಸಕರು, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Last Updated : Aug 18, 2020, 12:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.