ETV Bharat / state

ಬೆಳಗಾವಿಯ 7 ಸ್ಥಳಗಳಲ್ಲಿ ನಾಳೆ ಕೋವಿಡ್ ಲಸಿಕೆ ಡ್ರೈ ರನ್​

ಬಿಮ್ಸ್ ಆಸ್ಪತ್ರೆ ಸೇರಿದಂತೆ ಬೆಳಗಾವಿ ಜಿಲ್ಲೆಯ 7 ಕಡೆಗಳಲ್ಲಿ ನಾಳೆ ಕೋವಿಡ್ ಲಸಿಕೆ ಡ್ರೈ ರನ್ ನಡೆಯಲಿದ್ದು, ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

Nationwide Covid Vaccine dry run'
ಬೆಳಗಾವಿ ಜಿಲ್ಲಾ ಲಸಿಕಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಈಶ್ವರ್ ಗಡಾದ್
author img

By

Published : Jan 7, 2021, 10:11 PM IST

ಬೆಳಗಾವಿ : ಜಿಲ್ಲೆಯ 7 ಸ್ಥಳಗಳಲ್ಲಿ ನಾಳೆ ಎರಡನೇ ಹಂತದ ಕೊರೊನಾ ಲಸಿಕೆ ಡ್ರೈ ರನ್ ನಡೆಯಲಿದ್ದು, ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಲಸಿಕಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಈಶ್ವರ್ ಗಡಾದ್, ಬೆಳಗಾವಿ ನಗರದ ಜೆ‌ಎನ್‌ಎಂಸಿ ಮೆಡಿಕಲ್ ಕಾಲೇಜು, ಬಿಮ್ಸ್ ಮೆಡಿಕಲ್ ಕಾಲೇಜು, ಗೋವಾ ವೇಸ್ ಬಳಿಯ ಲೇಕ್ ವ್ಯೂ ಆಸ್ಪತ್ರೆ, ನಿಪ್ಪಾಣಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಯಕ್ಸಂಬಾದ ಸಮುದಾಯ ಆರೋಗ್ಯ ಕೇಂದ್ರ, ಅಥಣಿ ತಾಲೂಕು ಆಸ್ಪತ್ರೆ, ಗೋಕಾಕ್ ತಾಲೂಕಿನ ಕೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ‌ ರನ್ ನಡೆಯಲಿದೆ‌. ಪ್ರತಿ ಆಸ್ಪತ್ರೆಯಲ್ಲಿ 25 ಸ್ವಯಂ ಸೇವಕರಿಗೆ ಲಸಿಕೆ ವಿತರಿಸಲಾಗುತ್ತದೆ. ಒಂದು ಗಂಟೆಗೆ ಹತ್ತು ಜನರಿಗೆ ಮಾತ್ರ ಲಸಿಕೆ ವಿತರಿಸಲಾಗುತ್ತದೆ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲಾ ಲಸಿಕಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಈಶ್ವರ್ ಗಡಾದ್

ಈಗಾಗಲೇ ವ್ಯಾಕ್ಸಿನೇಷನ್‌ ಮಾಡುವ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಕೋವಿಡ್ ಆ್ಯಪ್‌ನಲ್ಲಿ ಈವರೆಗೆ ಜಿಲ್ಲೆಯ 29,500 ಆರೋಗ್ಯ ಕಾರ್ಯಕರ್ತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ 5 ಸಾವಿರ ಆರೋಗ್ಯ ಕಾರ್ಯಕರ್ತರು ನೋಂದಣಿಯಾಗುವ ನಿರೀಕ್ಷೆಯಿದೆ. ಫಾರ್ಮಸಿ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಐಡಿ ಸಮಸ್ಯೆಯಿಂದ ನೋಂದಣಿ ಆಗಿಲ್ಲ. ಜಿಲ್ಲೆಯಲ್ಲಿ ಒಟ್ಟು 35 ಸಾವಿರ ಆರೋಗ್ಯ ಕಾರ್ಯಕರ್ತರು ನೋಂದಣಿಯಾಗುವ ನಿರೀಕ್ಷೆಯಿದೆ. ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತರು ಎಷ್ಟೆಷ್ಟಿದ್ದಾರೆಂಬ ಅಂಕಿ-ಅಂಶ ಲಭ್ಯವಾಗಿಲ್ಲ. ಎಕ್ಸೆಲ್ ಶೀಟ್ ಟೆಂಪ್ಲೇಟ್‌ನಲ್ಲಿ ಗುರುತಿನ ಚೀಟಿ ನಂಬರ್, ಹುದ್ದೆ ವಿವರ ಹಾಕಿ ಆಯಾ ಸಂಸ್ಥೆಯವರು ಮಾಹಿತಿ ಕೊಟ್ಟಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಅಪ್ ‌ಲೋಡ್ ಮಾಡುತ್ತಿದ್ದಾರೆ. ನಾಳೆಯೇ ಲಸಿಕೆ ಬಂದರೂ ವ್ಯಾಕ್ಸಿನೇಷನ್​ಗೆ ಜಿಲ್ಲಾಡಳಿತ ಸಿದ್ಧವಿದೆ ಎಂದಿದ್ದಾರೆ.

ಓದಿ : ಮಂಡ್ಯದಲ್ಲಿ ಕೋವಿಡ್ ಲಸಿಕೆ ಡ್ರೈ ರನ್​ಗೆ ಸಕಲ ಸಿದ್ದತೆ

ವ್ಯಾಕ್ಸಿನ್ ಡಿಪೋದಲ್ಲಿ 13.5 ಲಕ್ಷ ಡೋಸ್ ಸಾಮರ್ಥ್ಯದ ವಾಕ್ ಇನ್ ಕೂಲರ್ ಇದೆ. ನಾವು ನಿರೀಕ್ಷೆ ಮಾಡಿದ್ದು 4 ಲಕ್ಷ ಡೋಸ್. ಹೀಗಾಗಿ, ವ್ಯಾಕ್ಸಿನ್ ಸಾಗಣೆಗೂ ಯಾವುದೇ ಸಮಸ್ಯೆ ಇಲ್ಲ. ಎರಡು ಇನ್ಸೂಲೇಟೇಡ್ ವ್ಯಾನ್ ಹಾಗೂ ಕೋಲ್ಡ್ ಬಾಕ್ಸ್​‌ಗಳಳು ಇವೆ. ಜಿಲ್ಲೆಯಲ್ಲಿ 32 ಲಕ್ಷ ಲಸಿಕೆ ಸಂಗ್ರಹಣಾ‌ ಸಾಮರ್ಥ್ಯವಿದ್ದು, 180 ಕೋಲ್ಡ್ ಚೈನ್ ಪಾಯಿಂಟ್ಸ್‌ಗಳಲ್ಲೂ ಲಸಿಕೆ ಸಂಗ್ರಹ ಮಾಡಬಹುದು. ಬೆಳಗಾವಿ ಜಿಲ್ಲೆ ರಾಜ್ಯ ಮಟ್ಟದ ಲಸಿಕೆ ಸಂಗ್ರಹಣಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೆ ಈಗಾಗಲೇ ಬೆಳಗಾವಿಯಿಂದ ಲಸಿಕೆಗಳನ್ನು ಸಾಗಾಟ ಮಾಡಲಾಗುತ್ತಿದೆ. ಹೀಗಾಗಿ, ಲಸಿಕೆ ಬಂದಿದ್ದೇ ಆದ್ರೆ ಲಸಿಕೆ ಸಂಗ್ರಹಕ್ಕಾಗಲಿ, ಸಾಗಾಟಕ್ಕಾಗಲಿ ಯಾವುದೇ ತೊಂದರೆ ಇಲ್ಲ ಎಂದು ಈಶ್ವರ್ ಗಡಾದ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.