ETV Bharat / state

ಕೋವಿಡ್ ನಿಯಮ ಉಲ್ಲಂಘನೆ: ಬೆಳಗಾವಿಯಲ್ಲಿ ಸಂಗ್ರಹವಾದ ದಂಡ ಎಷ್ಟು ಗೊತ್ತಾ? - ಬೆಳಗಾವಿ ಲೇಟೆಸ್ಟ್​ ಅಪ್ಢೇಟ್​ ನ್ಯೂಸ್​

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದವರಿಂದ 45,29,250 ರೂ.ದಂಡ ಸಂಗ್ರಹಿಸಲಾಗಿದ್ದು, ಈವರೆಗೆ 7,306 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದ್ದಾರೆ.

DC MG Hiremath
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
author img

By

Published : May 29, 2021, 7:49 AM IST

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದವರಿಂದ ಬರೋಬ್ಬರಿ 45,29,250 ರೂ.ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಕುರಿತು 36,352 ಪ್ರಕರಣಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ 240 ಪ್ರಕರಣಗಳು ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ, 2020 ಅಡಿಯಲ್ಲಿ 117 ಪ್ರಕರಣಗಳನ್ನು ದಾಖಲಿಸಲಾಗಿದೆ. ಆಕ್ಸಿಜನ್ ಹಾಗೂ ರೆಮ್​ಡಿಸಿವರ್ ಕುರಿತು ಒಂದು ಪ್ರಕರಣ ಹಾಗೂ ಇದುವರೆಗೆ 7,306 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಮರ್ಪಕ ಆಕ್ಸಿಜನ್ ಲಭ್ಯತೆ:

ಸಮರ್ಪಕವಾಗಿ ಅವಶ್ಯಕತೆಗನುಸಾರವಾಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 15 ಕೆ.ಎಲ್. ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಈಗ ಸರ್ಕಾರದಿಂದ 24 ಕೆ.ಎಲ್. ಆಕ್ಸಿಜನ್ ಹಂಚಿಕೆಯಾಗಿದೆ. ಸ್ಥಳೀಯವಾಗಿ 3 ಸಂಸ್ಥೆಗಳಿಂದ 5 ಕೆ.ಎಲ್. ತಯಾರಿಕೆಯಾಗಿ ಕ್ರಮಬದ್ಧವಾಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಅಲ್ಲದೇ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೆಮ್​​​ಡಿಸಿವರ್​​ ಲಸಿಕೆ ಪೂರೈಕೆ ಮಾಡಲಾಗುತ್ತಿದೆ ಎಂದಿದ್ದಾರೆ.

ಕೋವಿಡ್ ಅಂಕಿ ಅಂಶಗಳ ಮಾಹಿತಿ :

ಮಾ.17 ರಿಂದ ಮೇ 27ರವರೆಗೆ ಜಿಲ್ಲೆಯಲ್ಲಿ ಒಟ್ಟು 2,28,700 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೆ 34,381 ಜನರಲ್ಲಿ ಸೋಂಕು ದೃಢಪಟ್ಟಿದೆ. 16,180 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, 17,904 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಹೋಂ ಐಸೊಲೇಷನ್​​ನ‌ಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ 14,776 ಆಗಿದ್ದು, ಕೋವಿಡ್ ಆಸ್ಪತ್ರೆಯಲ್ಲಿ 601 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಮರಣ ಪ್ರಮಾಣ ಕಡಿಮೆ:

ಕೋವಿಡ್ ಸೋಂಕಿನಿಂದ 170 ಜನ ಮರಣ ಹೊಂದಿದ್ದಾರೆ. ಅಲ್ಲದೇ, ಸಕಾರಾತ್ಮಕ ಪ್ರಕರಣ ಶೇಕಡವಾರು (ಪಾಸಿಟಿವಿಟಿ ರೇಟ್) ಕಳೆದ 10 ದಿನಗಳಿಂದ 21.72% ಆಗಿದ್ದು, ಗುಣಮುಖರಾದವರ ಪ್ರಮಾಣ 70.3 % ಆಗಿದೆ. ಮರಣ ಪ್ರಮಾಣ (ಕಳೆದ 10 ದಿನಗಳಿಂದ) 0.87% ಆಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.