ETV Bharat / state

ಬೆಳಗಾವಿ: ಕೋವಿಡ್​​ ಹೊಡೆತಕ್ಕೆ ನೆಲಕಚ್ಚಿದ ಕೇಟರಿಂಗ್ ಉದ್ಯಮ - ಬೆಳಗಾವಿ ಕೇಟರಿಂಗ್ ಉದ್ಯಮ

ಕೋವಿಡ್​ ಲಾಕ್​ಡೌನ್​ನಿಂದಾಗಿ ಪ್ರತೀ ಕ್ಷೇತ್ರವೂ ನಲುಗಿದ್ದು, ಕೇಟರಿಂಗ್​​​ ಉದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದವರು ಕೂಡ ಸಂಕಷ್ಟಕ್ಕೊಳಗಾಗಿದ್ದಾರೆ. ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವ ತಿಂಗಳಲ್ಲೇ ಎರಡನೇ ಅಲೆ ಕೋವಿಡ್​ ಬಂದು ಕೇಟರಿಂಗ್​ ಉದ್ಯಮ ನೆಲಕಚ್ಚಿದೆ.

covid effects on Catering business
ನೆಲಕಚ್ಚಿದ ಕೇಟರಿಂಗ್ ಉದ್ಯಮ
author img

By

Published : Jun 8, 2021, 8:48 AM IST

ಬೆಳಗಾವಿ: ಮಹಾಮಾರಿ ಕೋವಿಡ್​​ ಅಟ್ಟಹಾಸ ಎಲ್ಲ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಕೇಟರಿಂಗ್​​​ ಉದ್ಯಮವೂ ಇದಕ್ಕೆ ಹೊರತಾಗಿಲ್ಲ. ಕೊರೊನಾ ಹೊಡೆತಕ್ಕೆ ಜಿಲ್ಲೆಯಲ್ಲಿ ಕೇಟರಿಂಗ್ ಉದ್ಯಮ ನೆಲಕಚ್ಚಿದೆ. ಅದನ್ನೇ ನಂಬಿಕೊಂಡಿದ್ದ ನೂರಾರು ಕಾರ್ಮಿಕರೀಗ ಸಂಕಷ್ಟ ಅನುಭವಿಸುತ್ತಿದ್ದಾರೆ.

ಕೊರೊನಾ ಎರಡನೇ ಅಲೆಗೆ ಗಡಿ ಜಿಲ್ಲೆ ಬೆಳಗಾವಿ ತತ್ತರಿಸಿದೆ. ಮಹಾಮಾರಿ ಕೊರೊನಾಗೆ ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಸಾವು-ನೋವು ಸಂಭವಿಸಿವೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್​ಡೌನ್​​ ಜಾರಿಗೊಳಿಸಿದೆ. ಅಲ್ಲದೇ ಜಿಲ್ಲಾಡಳಿತ ಕೂಡ ವೀಕೆಂಡ್ ಸಂಪೂರ್ಣ ಲಾಕ್‍ಡೌನ್ ಘೋಷಿಸಿದೆ.

ಕೇಟರಿಂಗ್ ಉದ್ಯಮದ ಮೇಲೆ ಕೋವಿಡ್​ ಎಪೆಕ್ಟ್​​ - ಉದ್ಯಮಿ ಮೀನಾಕ್ಷಿ ಏನಂತಾರೆ?

ಹೀಗಾಗಿ ಅನಗತ್ಯ ಜನಸಂಚಾರ ನಿಂತಿದೆ. ಅಲ್ಲದೇ ಮದುವೆ, ಸಭೆ - ಸಮಾರಂಭಗಳಿಗೆ ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ. ಅವಕಾಶ ನೀಡಿದರೂ 25 ಜನರು ಮಾತ್ರ ಭಾಗಿಯಾಗಬೇಕು ಎಂಬ ಷರತ್ತು ವಿಧಿಸಿದೆ. ಇನ್ನು ಇತರೆ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಸಭೆಗಳಿಗೂ ಅವಕಾಶ ಇಲ್ಲ. ಕೊರೊನಾಗೂ ಮೊದಲು ಈ ಎಲ್ಲ ಸಭೆ-ಸಮಾರಂಭಗಳಿಗೆ ಕೇಟರಿಂಗ್​​ ವ್ಯವಸ್ಥೆ ಮಾಡಲಾಗುತ್ತಿತ್ತು. ಇದೀಗ ಸಭೆಗಳೇ ರದ್ದಾಗಿರುವ ಕಾರಣ ಅನೇಕ ಕಾರ್ಯಕ್ರಮಗಳು ಮನೆಮಟ್ಟಿಗೆ ನಡೆಯುತ್ತಿರುವ ಕಾರಣ ಕೇಟರಿಂಗ್ ಉದ್ಯಮವೂ ನೆಲಕಚ್ಚಿದೆ. ಹೀಗಾಗಿ ಕೇಟರಿಂಗ್ ಉದ್ಯಮ ಮೇಲೆ ಅವಲಂಬಿತರಾಗಿದ್ದ ಜಿಲ್ಲೆಯ ನೂರಾರು ಕಾರ್ಮಿಕರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಂಭ್ರಮವನ್ನೇ ಕಿತ್ತುಕೊಂಡ ಕೊರೊನಾ:

ಸಭೆ-ಸಮಾರಂಭಗಳು, ಗೃಹಪ್ರವೇಶ, ಮದುವೆ, ಜನ್ಮದಿನ, ನಾಮಕರಣ, ನಿಶ್ಚಿತಾರ್ಥ ಹೀಗೆ ಅನೇಕ ವಿಶೇಷ ದಿನಗಳ ವೇಳೆ ದೊಡ್ಡ ಪ್ರಮಾಣದಲ್ಲಿ ಜನ ಸೇರಿ ಸಮಾರಂಭ ಮಾಡಲಾಗುತ್ತಿತ್ತು. ಸ್ನೇಹಿತರು, ಸಂಬಂಧಿಗಳು ಹಾಗೂ ನೆರೆಹೊರೆಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿತ್ತು. ಇಂತಹ ಸಮಯದಲ್ಲಿ ಕೇಟರಿಂಗ್ ಮಾಡುವವರಿಗೂ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಇರುತ್ತಿತ್ತು. ಆದರೀಗ ಜನರ ಸಂಭ್ರಮವನ್ನೇ ಕೊರೊನಾ ಕಿತ್ತುಕೊಂಡಿದೆ.

ನೆಲಕಚ್ಚಿದ ಕೇಟರಿಂಗ್ ಉದ್ಯಮ:

ಜಿಲ್ಲಾಡಳಿತದ ನಿರ್ಬಂಧದ ಕಾರಣಕ್ಕೆ ಅದ್ಧೂರಿಯಾಗಿ ನಡೆಸಲಾಗುತ್ತಿದ್ದ ಈ ಎಲ್ಲ ಕಾರ್ಯಕ್ರಮಗಳನ್ನು ಇದೀಗ ಸರಳವಾಗಿ ನಡೆಸಲಾಗುತ್ತಿದೆ. ಕುಟುಂಬದ ಸದಸ್ಯರಷ್ಟೇ ಕೂಡಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮನೆಯಲ್ಲೇ ಅಡುಗೆ ತಯಾರಿಸಲಾಗುತ್ತಿದೆ. ಇದ್ರಿಂದ ಕೇಟರಿಂಗ್ ಉದ್ಯಮ ನೆಲಕಚ್ಚಿದೆ.

ಕಾರ್ಯಕ್ರಮಗಳು ಹೆಚ್ಚಿರುವ ಸಮಯದಲ್ಲೇ ಕೊರೊನಾ ಅಟ್ಟಹಾಸ:

ಕಳೆದ ಎರಡು ವರ್ಷಗಳಿಂದ ಏಪ್ರಿಲ್, ಮೇ, ಜೂನ್ ತಿಂಗಳಲ್ಲೇ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಬಹುತೇಕ ಕಡೆ ಈ ಮೂರು ತಿಂಗಳಲ್ಲಿ ಮದುವೆ, ಎಂಗೇಜ್‍ಮೆಂಟ್ ಹಾಗೂ ಗೃಹಪ್ರವೇಶಗಳು ಅಧಿಕ ಪ್ರಮಾಣದಲ್ಲಿ ನಡೆಯುತ್ತವೆ. ಕಾರ್ಯಕ್ರಮ ಪೂರ್ವವೇ ಕೇಟರಿಂಗ್‍ಗೆ ಅಡ್ವಾನ್ಸ್ ಪಡೆದಿರುತ್ತಾರೆ. ಕಳೆದ ವರ್ಷವೂ ಏಪ್ರಿಲ್​, ಮೇ ತಿಂಗಳಿನಲ್ಲಿ ಕೊರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರ ದೇಶಾದ್ಯಂತ ಸಂಪೂರ್ಣ ಲಾಕ್‍ಡೌನ್ ಘೋಷಿಸಿತ್ತು. ಈ ವರ್ಷ ತಾಂಡವವಾಡುತ್ತಿರುವ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮತ್ತೆ ಲಾಕ್​ಡೌನ್​​ ಜಾರಿಗೊಳಿಸಿದೆ. ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇದ್ದು, ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. ಇದ್ದರೂ ಎಲ್ಲವೂ ನಿಯಮಾನುಸಾರವೇ ನಡೆಯಬೇಕಿದೆ. ಹಾಗಾಗಿ ಕಳೆದ ಎರಡು ವರ್ಷಗಳಿಂದ ಕೊರೊನಾ ಹೊಡೆತಕ್ಕೆ ಸಿಲುಕಿ ಕೇಟರಿಂಗ್ ಉದ್ಯಮ ನಂಬಿಕೊಂಡಿದ್ದ ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉದ್ಯೋಗಗಳು ಕಡಿತ:

ಕೇಟರಿಂಗ್ ನಡೆಸುವ ಪ್ರತಿಯೊಬ್ಬರು 15ರಿಂದ 25 ಜನರಿಗೆ ಉದ್ಯೋಗ ನೀಡುತ್ತಾರೆ. ಜಿಲ್ಲೆಯಲ್ಲಿ 700ಕ್ಕೂ ಅಧಿಕ ಮಂದಿ ಕೇಟರಿಂಗ್ ಉದ್ಯಮ ಮಾಡುವವರಿದ್ದಾರೆ. ಆದ್ರೀಗ ಕಾರ್ಯಕ್ರಮಗಳು ಇಲ್ಲದ ಕಾರಣ ಕೇಟರಿಂಗ್​ಗೆ ಕರೆಯುವವರೇ ಇಲ್ಲ. ಹೀಗಾಗಿ ಕೇಟರಿಂಗ್ ನಡೆಸುವವರು ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. 25 ಜನರನ್ನಿಟ್ಟುಕೊಂಡು ಕೇಟರಿಂಗ್ ನಡೆಸುತ್ತಿದ್ದವರು ಇಂದು ಕೇವಲ ಇಬ್ಬರನ್ನಷ್ಟೇ ಕೆಲಸದಲ್ಲಿ ಉಳಿಸಿಕೊಂಡು ಉಳಿದವರನ್ನು ತೆಗೆದಿದ್ದಾರೆ. ಕೇಟರಿಂಗ್ ನಡೆಸಲು ಬೇಕಾದ ಎಲ್ಲ ವಸ್ತುಗಳ ಖರೀದಿಗಾಗಿ ಕೇಟರಿಂಗ್ ಉದ್ಯಮಿಗಳು ಲಕ್ಷಾಂತರ ರೂ. ಸಾಲ ಮಾಡಿದ್ದು, ಇದೀಗ ಅದನ್ನು ಪಾವತಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.

ಈ ಬಗ್ಗೆ ಕೇಟರಿಂಗ್​ ಉದ್ಯಮಿ ಮೀನಾಕ್ಷಿ ಮಿಶ್ರಕೋಟಿ ಮಾತನಾಡಿ, ಕೋವಿಡ್​ ಲಾಕ್​ಡೌನ್​ನಿಂದ ನಮಗೆ ಬಹಳಾನೇ ಕಷ್ಟ ಆಗಿದೆ. 8 ಮಂದಿ ಇಟ್ಟುಕೊಂಡು ಕೆಲಸ ಮಾಡಿಸುತ್ತಿದ್ದೆವು. ಆದ್ರೀಗ ಇಬ್ಬರು ಕಾರ್ಮಿಕರನ್ನು ಮಾತ್ರ ಕರೆಸಿಕೊಳ್ಳುತ್ತಿದ್ದೇವೆ. ಸಾಲ ಮಾಡಿ ಉದ್ಯಮ ಆರಂಭಿಸಿದ್ದೇವೆ. ಆದ್ರೀಗ ಜೀವನ ನಿರ್ವಹಣೆ ಕಷ್ಟ ಆಗಿದೆ. ಕಾರ್ಯಕ್ರಮಗಳು ಹೆಚ್ಚಿರುವ ಸಮಯದಲ್ಲೇ ಕೊರೊನಾ ವಕ್ಕರಿಸಿ ನಮಗೆ ತೊಂದರೆ ಆಗಿದೆದೆ ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ: ಮಂಗಳೂರು: ಕೊರೊನಾ ಪರೀಕ್ಷೆ ದರ ಹೆಚ್ಚಳವಾಗದಂತೆ ಜಿಲ್ಲಾಡಳಿತ ಕ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.