ETV Bharat / state

ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾವೇಶಕ್ಕೆ ಕ್ಷಣಗಣನೆ: ಲಕ್ಷ ಜನರು ಸೇರುವ ಸಾಧ್ಯತೆ

ಇಂದು ಬೆಳಗ್ಗೆ 10.30ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಬಾಗಲಕೋಟೆಗೆ ಪ್ರಯಾಣ ಬೆಳಸಲಿದ್ದಾರೆ. ಬಾಗಲಕೋಟೆಯಲ್ಲಿ ಸಕ್ಕರೆ ಕಾರ್ಖಾನೆಯ ಇಥೆನಾಲ್​ ಘಟಕ ಉದ್ಘಾಟನೆ ಮಾಡಿ ಮರಳಿ ಬೆಳಗಾವಿಗೆ ಬರಲಿದ್ದಾರೆ. ಬಳಿಕ ಮಧ್ಯಾಹ್ನ ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

count down start for Jana Sevaka Convention at Belgaum
ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾವೇಶಕ್ಕೆ ಕ್ಷಣಗಣನೆ; ಲಕ್ಷ ಜನರು ಆಗಮಿಸುವ ಸಾಧ್ಯತೆ
author img

By

Published : Jan 17, 2021, 8:40 AM IST

Updated : Jan 17, 2021, 9:10 AM IST

ಚಿಕ್ಕೋಡಿ: ಬೆಳಗಾವಿಯ ಜನಸೇವಕ ಸಮಾರೋಪ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ‌ ಮೂರು ಲಕ್ಷ ಜನರು ಆಗಮಿಸುವ ಸಾಧ್ಯತೆಯಿದೆ.

ಕುಂದಾನಗರಿ ಈಗ ಕೇಸರಿಮಯವಾಗಿದ್ದು, ಫ್ಲೆಕ್ಸ್, ಕಟೌಟ್, ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ, ನಗರದಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್ ನಿಯೋಜನೆಗೊಳಿಸಲಾಗಿದೆ.

ಜನಸೇವಕ ಸಮಾರೋಪ ಸಮಾವೇಶಕ್ಕೆ ಕ್ಷಣಗಣನೆ

ಈ ಸುದ್ದಿಯನ್ನೂ ಓದಿ: ನಾಳೆ ಕುಂದಾನಗರಿಗೆ ಬಿಜೆಪಿ ಚಾಣಕ್ಯ; ಹೀಗಿದೆ ಅಮಿತ್ ಶಾ ಟೂರ್ ಪ್ಲಾನ್​

ಬೆಳಗ್ಗೆ 10.30ಕ್ಕೆ ಅಮಿತ್ ಶಾ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಬಾಗಲಕೋಟೆಗೆ ಪ್ರಯಾಣ ಬೆಳಸಲಿದ್ದಾರೆ. ಬಾಗಲಕೋಟೆಯಲ್ಲಿ ಸಕ್ಕರೆ ಕಾರ್ಖಾನೆಯ ಇಥೆನಾಲ್​ ಘಟಕ ಉದ್ಘಾಟನೆ ಮಾಡಿ ಮರಳಿ ಬೆಳಗಾವಿಗೆ ಬರಲಿದ್ದಾರೆ. ಬಳಿಕ ಮಧ್ಯಾಹ್ನ ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಆ ನಂತರ ಬೆಳಗಾವಿಯಲ್ಲಿ ಪಕ್ಷದ ಕೋರ್​​ಕಮಿಟಿ ಮೀಟಿಂಗ್ ನಡೆಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: ಈ ಸುದ್ದಿಯನ್ನೂ ಓದಿ: ಸಚಿವ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆ ಉದ್ಘಾಟಿಸಲಿರುವ ಅಮಿತ್ ಶಾ

ನಂತರ ದಿವಂಗತ ಸುರೇಶ್ ಅಂಗಡಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.

Last Updated : Jan 17, 2021, 9:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.